ವೃಂದಾವನವೆ ಮಂದಿರವಾಗಿದೆ / Vrundaavanave mandiravaagide

ದಯೆ ತೋರಮ್ಮ ಶ್ರೀ ತುಳಸಿ ವರನೀಡಮ್ಮ ಶ್ರೀ ತುಳಸಿ
ದಯಮಾಡಮ್ಮ ಶ್ರೀ ತುಳಸಿ ನಿತ್ಯವು ಪೂಜಿಪೆ ವರ ತುಳಸಿ
ಇಂದಿರೆ ಸುಂದರಿ ವಂದಿಪೆ ಮಾಧವಿ ಶುಭವನು ಮಾಡೆ ಜಯ ತುಳಸಿ ||ಇಂದಿರೆ||

ವೃಂದಾವನವೆ ಮಂದಿರವಾಗಿದೆ ನಿಂದಿರೆ ಶ್ರೀತುಳಸಿ||ವ್ರಂದಾವನವೇ|| ನಂದನಂದನ ಮುಕುಂದಗೆ ಪ್ರಿಯಳಾದ ||2|| ಚೆಂದದ ಶ್ರೀ ತುಳಸೀ…. || ವೃಂದಾವನವೆ||

ತುಳಸಿಯ ವನದಲಿ ಹರಿ ಇಹನೆಂಬುದ ಶ್ರತಿಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ|
ತುಳಸಿ ಸ್ಪರ್ಶವ ಮಾಡೆ,ದೇಹ ಪಾವನವೆಂದು |
ತಿಳಿದುದಿಲ್ಲವೆ ಕೇಳಿ ತುಳಸಿ ಸ್ಮರಣೆ ಮಾಡಿ ,ಸಕಲ ಇಷ್ಟವ ಪಡೆದು | ಸುಖದಲಿ ನೀವು ಬಾಳಿ ||ವೃಂದಾವನವೆ||

ಮೂಲ ಮ್ರತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು
ಮಾಲೆ ಕೊರಳಲಿಟ್ಟ ,ಮುನುಜಗೆ ಮುಕುತಿಯ ಮಾರ್ಗವ ತೋರುವುದು |
ಕಾಲ ಕಾಲಗಳಲಿ ,ಮಾಡುವ ದುಷ್ಕರ್ಮ | ಕಳೆದು ಬಿಸಾಡುವುದು
ಕಾಲನ ದೂತರ ಕಳಚಿ ಕೈವಲ್ಯದ | ಲೀಲೆಯ ತೋರುವುದು
||ವೃಂದಾವನವೆ||

ಧರೆಯೊಳು ಸುಜನರ ಮರೆಯದೆ ಸಲಹುವ ,ವರಲಕ್ಷ್ಮಿ ಶ್ರೀ ತುಳಸಿ
ಪರಮ ಭಕ್ತರ ಘೋರ ಪಾಪಗಳ ತರಿದು ಪಾವನ ಮಾಡುವ ತುಳಸಿ |
ಸಿರಿ, ಆಯು, ಪುತ್ರಾದಿ ಸಂಪದಗಳನ್ನಿತ್ತು| ಹರುಷಗೊಳಿಪ ತುಳಸೀ…
ಪುರಂದರವಿಠ್ಠಲನ ಚರಣ ಕಮಲಗಳ | ಪುರಂದರವಿಠ್ಠಲನಾ……ಆ…ಆ… |
ಪುರಂದರವಿಠ್ಠಲನ ಚರಣ ಕಮಲಗಳ | ಸ್ಮರಣೆ ಕೊಡುವ ತುಳಸಿ
||ವೃಂದಾವನವೆ||

Lyrics in English

Daye toramma sri tulasi vara needamma sri tulasi daya maadamma, sri tulasi nityavu poojipe vara tulasi indire sundari vandipe madhavi shubhavanu maade jaya tulasi || indire ||

Vrundaavanave mandiravaagide nindire sri tulasi ||vrundaavanave || nandanandana mukundage priyalaada chendada sri tulasi ||vrundaavanave ||

Tulasiya vanadali hari ehanembudu shruti saarutide keli | tulasi darshanadinda duritagalellavu dooravaaguvudu keli | tulasi sparshava maade deha paavanavendu || tilidudillave keli tulasi smarane maadi, sakala eshtava padedu | sukhadali neevu baali || vrundaavanave ||

Moola mruttikeyanu mukhadali dharisalu moorloka vashavahudu | maale koralalitta manujage mukutiya maargava toruvudu | kaala kaalagalali maaduva dushkarma | kaledu bisaaduvudu kaalana dootara kalachi kaivalyada | leeleya toruvudu || vrundaavanave ||

Dhareyolu sujanara mareyade salahuva varalakshmi sri tulasi | parama bhaktara ghora paapagala taridu paavana maaduva tulasi | siri, aayu putraadi sampadagalannittu | harushagolipa tulasi …. | purandara vittalana charana kamalagala | purandara vittalanaa …. a….. a…. | purandara vittalana charana kamalagala | smarane koduva tulasi | vrundaavanave ||


ಶ್ರೀ ತುಳಸಿ ದಯೆ ತೋರಮ್ಮ /Sri tulasi daye toramma amma

ಶ್ರೀ ತುಳಸಿ ದಯೆ ತೋರಮ್ಮ ಅಮ್ಮ
ಶ್ರೀ ತುಳಸಿ ದಯೆ ತೋರಮ್ಮ

ಅರಿಶಿನ ಕುಂಕುಮ ಸೌಭಾಗ್ಯ ನೀಡಿ ||2||
ಚಿರಕಾಲ ಕಾಪಾಡಮ್ಮ ಅಮ್ಮ
ಶ್ರೀ ತುಳಸಿ ದಯೆ ತೋರಮ್ಮ

ಜನಿಸಿದ ಮನೆಯ ಶಾಂತಿಯ ಉಳಿಸಿ ಆ…||2||
ವರಿಸಿದ ಮನೆಯ ಮನೆತನ ಬೆಳೆಸಿ ||2||
ತುಂಬಿದ ಸಂಸಾರ ಸಂತಸ ನೆಲೆಸಿ
ಎಂದೆಂದೂ ಇರಲು ಹರಸಮ್ಮ ತುಳಸಿ ||2||
||ಶ್ರೀ ತುಳಸಿ||

ಮುಂದಿನ ಬಾಳಿನ ದಾರಿಯ ತೋರಿಸಿ ಆ…||2||
ಮಕ್ಕಳ ಅರಿವಿನ ದೀಪವ ಬೆಳಗಿಸಿ ||2||
ಒಳ್ಳೆಯ ತಂದೆ -ತಾಯಿಯೆನಿಸಿ
ಎಂದೆಂದೂ ಇರಲು ಹರಸಮ್ಮ ತುಳಸಿ||2||
||ಶ್ರೀ ತುಳಸಿ||

Lyrics in English

Sri tulasi daye toramma amma | sri tulasi daye toramma ||

Arishina kunkuma sowbhagya needi | chirakaala kapadamma amma | sri tulasi daye toramma ||2||

Janisida maneya shantiya ulisi a..m ||2|| varisida maneya manetana belesi ||2|| tumbida samsara santasa nelesi | endendu eralu harasamma tulasi ||2||sri tulasi||

Mundina balina dariya torisi a…. ||2|| makkala arivina deepava belagisi ||2|| olleya tande taayiyenisi | endendu eralu harasamaa tulasi ||2||sri tulasi||


ಸ್ವಾಮಿ ಮುಖ್ಯಪ್ರಾಣ ನಿನ್ನ / Swami mukhyaprana ninna

ಸ್ವಾಮಿ ಮುಖ್ಯಪ್ರಾಣ
ನಿನ್ನ ಮರೆವರ ಗಂಟಲ ಗಾನ ||
ಹಿಡಿದ್ಯೊ ರಾಮನ ಚರಣ||2||
ನೀನ್ ಹೌದವುದೋ ಜಗತ್ರಾಣ ||ಸ್ವಾಮಿ||

ಸಂಜೀವನ ಪರ್ವತವ ನೀ ಅಂಜದೆ ತಂದ್ಯೊ ದೇವ ||
ಅಂಜನೆ ಸುತ ಸದಾ ಕಾವ||2||
ಹ್ರತ್ಕಂಜವಾಸ ಸರ್ವಜೀವ || ಸ್ವಾಮಿ||

ಏಕಾದಶಿಯ ರುದ್ರ ನೀ ಒಯಿದ್ಯೊ ರಾಮರ ಮುದ್ರ ||
ಸಕಲವಿದ್ಯಾ ಸಮುದ್ರ||2||
ನೀ ಹೌದವುದೋ ಭಲಭದ್ರಾ ||ಸ್ವಾಮಿ||

ವೈಕುಂಠದಿಂದ ಬಂದು ನೀ ಪಂಪಾ ಕ್ಷೇತ್ರದಿ ನಿಂದು||
ಯಂತ್ರೋಧ್ಧಾರಕನೆಂದು||2||
ಪುರಂದರವಿಠ್ಠಲ ಸಲಹೆಂದು ||ಸ್ವಾಮಿ||

Lyrics in English

Swami mukhyaprana ninna marevara gantala gaana || hididyo ramana charana ||2 times|| neen howdavudo jagatraana ||swami||

Sanjeevana parvatava nee anjade tandyo deva|| anjade suta sada kaava ||2times|| hrutkanjavaasa sarvajeeva ||swami||

Ekadashiya rudra nee oyidyo ramara mudra|| sakalavidya samudra | 2times|nee howdavudo bhalabhadra||swami||

Vaikuntadinda bandu nee pampa kshetradi nindu || yantroddhaarakanendu |2times| purandaravittala salahendu ||swami||


ಜೈ ಜೈ ಹನುಮಾನ್ ಜೈ ಗುರು / Jai jai hanuman jai guru jai

ಮನೋಜವಂ ಮಾರುತ ತುಲ್ಯ ವೇಗಂ | ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ | ಶ್ರೀ ರಾಮ ಧೂತಂ ಶಿರಸಾ ನಮಾಮಿ
ಬುಧ್ಧಿರ್ಬಲಂ ಯಶೋಧೈರ್ಯಂ | ನಿರ್ಭಯತ್ವಂ ಅರೋಗತ
ಅಜಾಡ್ಯಂ ವಾಕ್ಪಟುತ್ವಂಚ | ಹನುಮತ್ ಸ್ಮರಣಾತ್ ಭವೇತ್ ||

ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ||4 times||
ಪವನ್ ಪುತ್ರ ಹನುಮಾನ್ ಕೀ ಜೈ

ಆಂಜನೇಯ ಜೈ, ಬಲಭೀಮ ಜೈ, ಭಕ್ತರ ಅತುಲಿಥ ಬಲಧಾಮ ಜೈ
ಹನುಮಂತ ಜೈ, ಎಮ್ಮ ರಕ್ಷಿಸೊ ನೀ, ರಾಮ ವಿರೋಧಿಗಳನ್ನು ಶಿಕ್ಷಿಸೋ ||
|| ಆಂಜನೇಯ||

ಜೈ ಹನುಮಾನ್…. ಜೈ ಪವಮಾನ್…

ಬುಧ್ಧಿರ್ ಬಲ ಧೈರ್ಯಗಳ ಕರುಣಿಸೊ ,ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ನಿರ್ಭಯತ್ವ ಆರೋಗ್ಯ ಕರುಣಿಸೊ, ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ವಾಕ್ಪಟುತ್ವ ಹರಿ ಸ್ಮರಣೆ ಕರುಣಿಸೊ, ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಶ್ರೀರಾಮ ದರುಶನ ಭಾಗ್ಯ ಕರುಣಿಸೊ, ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ಭ ||
||ಆಂಜನೇಯ||
ಜೈ ಶ್ರೀ ರಾಮ್. ..ಜೈ ಶ್ರೀ ರಾಮ್

ರಾಮ ಸ್ಮರಣೆ ಕೊಡು, ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮ ಸೇವೆಯ ಕೊಡು, ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮಾಯಣದ ಕಥೆಯೊಳು ಬಂದು ಕೂಡು, ಜೈ ಜೈ ಹನುಮಾನ್
ಜೈ ಗುರು ಜೈ ಜೈ ಪವಮಾನ್ ||ರಾಮ ಸ್ಮರಣೆ||

ದಾಸ ಕೇಶವ ಸುತ ಮಾರುತಿ ಹನುಮ | ಹನುಮಂತ ಗುಣವಂತ
ಮಾರುತಿರಾಯ ಬಲವಂತ | ದಾಸಕೇಶವ ಸುತ ಮಾರುತಿ ಹನುಮ
ದಾಸಗ್ರೇಶರ ಜೈ ಬಲಭೀಮ, ಜೈ ಜೈ ಹನುಮಾನ್
ಜೈ ಗುರು ಜೈ ಜೈ ಪವಮಾನ್, ಪವನ್ ಪುತ್ರ್ ಹನುಮಾನ್ ಕೀ ಜೈ
||ಜೈ ಹನುಮಾನ್||

Lyrics in English

Manojavam marutatulya vegam | jitendriyam budhimataam varishtam | vaataatmajam vanarayutha mukhyam | srirama dhutam shirasa namaami | budhirbalam yashodhairyam | nirbhayatvam arogatam ajaadayam vaakpatutvam cha | hanumat smaranat bhavet ||

Jai jai hanuman jai guru jai jai pavamaan || 4 times || pavanaputra hanuman ki jai ||

Anjaneya jai, balabheema jai, bhaktara atulitha phaladhamaa jai | hanumanta jai, emma rakshiso nee, rama virodhigala shikshiso || anjaneya ||

Jai hanumaan …… jai pavamaan …..

Budhirbala dhairyagala karuniso, jai jai hanuman jai guru jai jai pavamaan | nirbhayatva arogya karuniso jai jai hanuman jai guru jai jai pavamaan | vaakpatutva hari smarane karuniso, jai jai hanuman jai guru jai jai pavamaan | srrama darushana bhagya karuniso, jai jai hanuman jai guru jai jai pavamaan || Anjaneya || jai sri ram …. jai sri ram

Raama smarane kodo, sri ram jai ram jai jai ram | rama seveya kodo, sri ram jai ram jai jai ram | ramayanada katheyolu bandu kodo, jai jai hanuman | jai guru jai jai pavaman || rama smarane ||

Daasa keshava suta maruti hanuma | hanumanta gunavanta marutiraya bhalavanta | dasakeshava suta maruti hanuma | dasagreshara jai bhalabheema, jai jai hanuman | jai guru jai jai pavaman | pavana putra hanuman ki jai || jai hanuman ||


ಗುಣವಾಯಿತೆನ್ನ ಭವರೋಗ / Gunavaayitenna bhavaroga

ಗುಣವಾಯಿತೆನ್ನ ಭವರೋಗ ಕೃಷ್ಣನೆಂಬ ವೈದ್ಯ ದೊರಕಿದನು |
ಗುಣವಾಗುವವರಿಗೆ ಎಣೆಯಿಲ್ಲ ಗುಣವಂತರಾಗುವರು ಭವದೆಲ್ಲ || ಗುಣವಾಯಿತೆನ್ನ||

ಸಂತತ ಹರಿಭಕ್ತಿ ಅನುಪಾನ , ಸಂತತ ಗುರುಭಕ್ತಿ ಮರುಪಾನ |
ಸಂತತ ಶ್ರವಣ ಕಠಿನ ಪಥ್ಯ |ಸಂತತ ಕೀರ್ತನ ಉಷ್ಣೋದಕ||
||ಗುಣವಾಯಿತೆನ್ನ||

ಸಹಸ್ರನಾಮದಿ ತಾ ವಂದ್ಯ ಸಕಲ ಸ್ವತಂತ್ರಕೆ ತಾ ಬಾಧ್ಯ |
ಹರಿ ಸರ್ವೋತ್ತಮನೆಂಬ ವೈದ್ಯಾ…ಆ…| ಪುರಂದರವಿಠಲನೆ ನಿರವದ್ಯ||ಗುಣವಾಯಿತೆನ್ನ||

Lyrics in English

Gunavaayitenna bhavaroga krishnanemba vaidya dorakidanu | gunavaaguvavarige eneyilla gunavantaraguvaru bhavadella ||gunavaayitenna||

Santata haribhakti anupana, santata shravana katina pathya | santata keertana ushnodaka ||gunavaayitenna ||

Sahasranaamadi taa vandya sakala swatantrake taa baadhya| hari sarvottamanemba vaidya … A…| purandaravitalane niravadya||gunavaayitenna||