ಎದುರಾರೊ ಗುರುವೆ ಸಮರಾರೊ /Eduraro guruve samanaro

ಎದುರಾರೊ ಗುರುವೆ ಸಮರಾರೊ ||pa||

ಮದನ ಗೋಪಾಲನ ಪ್ರಿಯ ಜಯರಾಯ ||a.pa||

ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡ ಗಡ ನಡಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ||1||

ಕುಟಿಲ ಮತಗಳೆಂಬೋ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ
ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ ||2||

ಅಮಿತ ದ್ವಿಜಾವಳಿ ಕುಮುದಗಳರಳಿಸಿ
ವಿಮತರ ಮುಖ ಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||3||

ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು ||4||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಿಟ್ಟು
ಶ್ರೀ ಸರ್ವಜ್ನರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾ ಸುಧಾ ಪಡೆದೆ ಯತೀಂದ್ರ||5||

ವನಜನಾಭನ ಗುಣಮಣಿಗಳ ಸರ್ವಜ್ನ-
ಮುನಿಕೃತ ಗ್ರಂಥಗಳವನಿಯೊಳಡಗೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋ ಧೀರ||6||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀ ಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿ ಮತ್ತೇಭಕಂಠೀರವ ಕ್ಷೋಭ್ಯ-
ತೀರ್ಥ ಕರಜ ಜಯತೀರ್ಥ ಯತೀಂದ್ರ ||7||

Lyrics in English

Eduraro guruve samanaro || pa ||
Madanagopalana priya jayaraya || a.pa |

Kadugarjisuva kesariyamte nimma vada
Gadaneya keluta nudi mundodade
Gada gada naduguta maygo maygalu
Adaviyo ladagoru nimma bitiyali || 1 ||

Kutilamatagalembo chatulandhakarakke
Patutara tattvaprakasi kentemba
Chatula tapadinda kandisi tejot
Katadi merede budhakatakabjamitra || 2 ||

Amitad vijavalikumuda galarasi
Vimatara mukakamalangala badisi
Svamatara hrutsantapagalodisi
Vimalasukirtiya padedeyo chandra || 3 ||

Vedasastragalembo srumgagalimda su
Dhadigramthagalembo stanadimdopputa tattva
Bodheyemba dugdha sishyavatsamgalige
Adaradali kotta yatisuradhenu || 4 ||

Vyasasutragalemba mandaravanu veda
Rasiyemba varasiyolagittu |
Srisarvaj~jara vakyapasadi sutti
Basuranyayasudha padeda yatindra || 5 ||

Vanajanabana gunamanigalu sarvaj~ja
Munikruta granthagal avaniyoladagire sa
Jjanarige tikanjanadinda torisi
Ganasukasadhana madidyo dhira || 6 ||

Arthimandara vedarthavicara sa
Martha srikrushna padambujalola pra
Tyarthi mattebakanthirav akshobya
Tirthakaraja jayatirthayatimndra || 7 ||


ಬಿಡುವೇನೇನಯ್ಯ ಹನುಮ ನಿನ್ನಾ / Biduvenenayya hanuma ninna

ಬಿಡುವೇನೇನಯ್ಯ ಹನುಮ ನಿನ್ನಾ ಬಿಡುವೇನೇನಯ್ಯ ಹನುಮ |
ಬಿಡುವೆನೇನೊ ಹನುಮ ನಿನ್ನ ಅಡಿಗಳಿಗೆ ಎರಗುವೆ ನಾನು |
ದೃಢ ಭಕುತಿ ಸುಜ್ಞಾನವನ್ನು ತಡಮಾಡದೆ ಕೊಡುವ ತನಕ
||ಬಿಡುವೇನೇನಯ್ಯ||

ಹಸ್ತ ಮ್ಯಾಲಕೆತ್ತಿದರೇನು ಹಾರಗಾಲ ಹಾಕಿದರೇನು |
ಭ್ರತ್ಯನು ನಿನ್ನವನು ನಾನು | ಹಸ್ತಿವರದನ ತೋರೊ ತನಕ |
||ಬಿಡುವೇನೇನಯ್ಯ||

ಡೊಂಕು ಮೋರೆ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲ |
ಕಿಂಕರನು ನಿನ್ನವ ನಾನು | ವೆಂಕಟ ವಿಠ್ಠಲನ ತೋರೋ ತನಕ
||ಬಿಡುವೇನೇನಯ್ಯ||

Lyrics in English

Biduvenenayya hanuma ninna biduvanenayya hanuma | biduvanenayya hanuma ninna adigalige eraguve nanu | dhrada bakuti sujnaanavannu tadamadade koduva tanaka || biduvanenayya ||

Hasta myaalakettidarenu haaragaala hakidarenu | bhratyanu ninnavanu naanu | hastivaradana toro tanaka | biduvanenayya ||

Donku more baalava tiddi hunkarisidare anjuvanalla | kinkaranu ninnava naanu | venkata vittalana toro tanaka || biduvanenayya ||


ಕುಲಕುಲ ಕುಲವೆನ್ನುತಿಹರೂ / Kulakula kulavennutiharo

ಕುಲಕುಲ ಕುಲವೆನ್ನುತಿಹರೂ|ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ |ಕುಲವ್ಯಾವುದು|
||ಕುಲಕುಲ||

ಕೆಸರೊಳು ತಾವರೆ ಹುಟ್ಟಲು ಅದತಂದು
ಬಿಸಜನಾಭನಿಗೆ ಅರ್ಪಿಸಲಿಲ್ಲವೆ |
ಹಸುವಿನ ಮಾಂಸದೊಳು ಉತ್ಪತ್ತಿ ಕ್ಷೀರವು |
ವಸುದೆಯೊಳಗೆ ಭೂಸುರರುಣ್ಣಲಿಲ್ಲವೆ
||ಕುಲಕುಲ||

ಮ್ರಘಗಳ ಮೈಯಲ್ಲಿ ಹುಟ್ಟಿದ ಕಸ್ತೂರಿ
ತೆಗೆದು ಪೂಸುವರು ಭೂಸುರರು |
ಒಗೆಯಿಂದ ನಾರಾಯಣ ಯಾವ ಕುಲದವ|
ಅಗಜವಲ್ಲಭನು ಯಾತರ ಕುಲದವನು
||ಕುಲಕುಲ||

ಆತ್ಮ ಯಾವ ಕುಲ ,ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ |
ಆತ್ಮಾಂತರಾತ್ಮ ನೆಲೆಯಾದಿ ಕೇಶವ|
ಆತನೊಲಿದ ಮೇಲೆ ಯಾತರಕುಲವಯ್ಯ
||ಕುಲಕುಲ||

Lyrics in English

Kulakula kulavennutiharo | kulavyaavudu satya sukhavulla janarige | kulavyaavudu || kulakula||

Kesarolu taavare huttalu adatandu bisajanabhanige arpisalillave | hasuvina maamsadolu utpatti ksheeravu | vasudeyolage bhusurarunnalillave || kulakula||

Mrughagala maiyalli huttida kasturi tegedu poosuvaru bhusuraru | ogeyinda narayana yaava kuladava | agajavallabhanu yaatara kuladavanu ||kulakula||

Aatma yava kula jeeva yaava kula tatvendriyagala kula pelirayya | aatmaantaatma neleyadi keshava | atanolida mele yaatarakulavayya ||kulakula||


ಶಿವನೇ ನಾ ನಿನ್ನ ಸೇವಕನಯ್ಯ / Shivane naa ninna sevakanayya

ಭವಮೋಚಕ ಭಗವತ ಶಾಸ್ತ್ರವ ಅವನೀಶಗೆ ಪೇಳ್ದವ ನೀನಲ್ಲವೇ

ಶಿವನೇ….
ಶಿವನೇ ನಾ ನಿನ್ನ ಸೇವಕನಯ್ಯ |
ದುರ್ಮನ ಬಿಡಿಸಯ್ಯಾ…. |
ಶಿವನೇ ನಾ ನಿನ್ನ ಸೇವಕನಯ್ಯ

ತ್ವೈಕಾರಿಕ ತೈಜಸ ತಾಮಸವೆಂಬ ತ್ರೈ ತತ್ವಗಳೆಂಬ
ಶಾಕಾರಿ ಶಾರ್ವರಿ ಭವತರ ಶಾಂಭ ಸುರಪಾದ್ಯರಬಿಂಬಾ.. |
ವೈಕಲ್ಯಾಸ್ಪದವಕಳೆದೊಮ್ಮೆಗೆ ವೈಕುಂಠಕೆಕರೆ ದ್ವೈ ಕರಿಗೊರಳ
||ಶಿವನೇ||

ಮ್ರತ್ಯುಂಜಯ ಮುಕ್ಕುರು ಹರ ಮಹದೇವ ದೇವರ್ಕಳ ಕಾವ
ಸ್ತುತ್ಯಾ ದ್ರಜ ದಿತಿಜ ತತಿ ಮನದಾವ ದುರಿತಾಂಭುದಿನಾವ |
ದ್ರತ್ತಿವಾಸ ಎನ್ನತ್ಯಪರಾಧಗಳೆತ್ತೆನಿಸದೆ ಕ್ರತ ಕ್ರತ್ಯನ ಮಾಡು ||
||ಶಿವನೇ||

ಸ್ಫಟಿಕಾಬಕ ಪಾಮೆ ಕಾಮಿತ ಫಲದ ಫಲ್ಗುಣ ಸಖ ಶ್ರೀಧರವಿಠ್ಠಲಶ್ರಾಯವಿತ್ತ
ಪವಿತ್ರ ತೀರದ ಚರ್ಮಾಂಭರನಾದಾ |
ಕುಟಿಲರಹಿತ ದುರ್ಜಟಿ ವ್ರಷಭಧ್ವಜನ ನಿಟಿಲನಯನ ಸಂಕಟವ ನಿವಾರಿಸೊ
||ಶಿವನೇ||

Lyrics in English

Bhavamochaka bhagavata shastrava avaneeshage peldava neenallave ||

Shivane … shivane naa ninna sevakanayya | durmana bidisayya | shivane naa ninna sevakanayya ||

Twaikaarika taijasa taamasavemba trai tatvagalemba shaakari sharvari bhavatara shaambha surapaadyarabimbaa …. | vaikalyaaspadavakaledommege vaikuntake kare dwaikarigorala || shivane||

Mrutyunjaya mukkuru hara mahadeva devarkala kaava stutyaadruja ditija tati manadaava duritaambudinaava | druttivasa ennatyaparadhagalettenisade kruta krutyana maadu || Shivane ||

Spatikaabaka paame kamita phalada phalguna sakha sridharavittalashraayavitta | pavitra teerada charmaambharanaada | kutila rahita durjati vrushabha dhwajana nitila nayana sankatava nivariso || shivane||