ಮನೆಯ ಕಟ್ಟುವರುಂಟು / Maneya kattuvaruntu

ಮನೆಯ ಕಟ್ಟುವರುಂಟು ಮಡದಿ ಮಕ್ಕಳು ಉಂಟು
ಧನವಗಳಿಸುವರುಂಟು ಗಳಿಸದಿದ್ದವರುಂಟು |
ಧನವ ಕಟ್ಟುವರುಂಟು ದಾನಮಾಡುವರುಂಟು|
ಋಣವ ಕೊಟ್ಟವರುಂಟು ಋಣ ಮಾಡಿದವರುಂಟು||

ಮನೆಗಾರ ತಣವಿದರೊಳು ಎಂದಿಗು ಬೇಡ|
ಮುನಿಗಳು ಸಹಿತಾಗಿ ಮೋಸಹೋದರು ಇದಕೆ||

ಗುಣಪೂರ್ವಚೆಲ್ವ ಗೋಪಾಲವಿಠ್ಠಲ ನಿನ್ನ|
ಗುಣಚಿಂತನೆಯೊಳಿಡು ಇಷ್ಟೇ ಸಾಕು|| ಇಷ್ಟೇ ಸಾಕು…||

Lyrics in English

Maneya kattuvaruntu madadi makkalu untu | dhanavagalisuvaruntu galisadiddavaruntu | dhanava kattuvaruntu daanamaaduvaruntu | runava kottavaruntu runa maadidavaruntu ||

Manegaara tanavidarolu endigu beda | munigalu sahitaagi mosahodaru edake ||

Gunapoorva chelva gopaalavittala ninna | gunachintaneyolidu eshte saaku ||


ಸೇವಕ ತನದ ರುಚಿ ಏನಳೆದೆಯೊ / Sevaka tanada ruchi enaledeyo

ಸೇವಕ ತನದ ರುಚಿ ಏನಳೆದೆಯೊ ದೇವ
ಹನುಮರಾಯ ವೈರಾಗ್ಯ ಬೇಡಿ ||ಸೇವಕ||
ಹನುಮಾ…….

ಉದದಿಯ ದಾಟಿ ಸೀತೆಯ ಕಂಡು ಬಂದಾಗ
ಮದುವೆಯ ಮಾಡೆನ್ನ ಎನಬಾರದಿತ್ತೆ |
ಪದದಿ ಪಾಷಾಣ ಹೆಣ್ಣ ಮಾಡಿದವನಿಗೆ |
ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ ಹೋದೆ |
||ಸೇವಕ||

ಕ್ಷಣದೊಳು ಸಂಜೀವನ ಗಿರಿ ತಂದಾಗ
ಹಣ ಹೊಣ್ಣು ಬೇಡಲು ಕೊಡದಿದ್ದನೇ |
ವಿನಯದ ವಿಭೀಷನಗೆ ರಾಜ್ಯವಿತ್ತಾ…|
ಇದು ಏನಶ್ಚಾರ್ಯ ಹನುಮಾ ನೀನೊಳ್ಳದೇ ಹೋದೆ |
||ಸೇವಕ||

ಸಾರ್ವಭೌಮನು‌ ತಾನೆ ಮೆಚ್ಚಿ ಬಂದಾಗಲೇ
ಪೂರ್ವಿಯ ಬೇಡಲು ಕೊಡದಿದ್ದನೇ |
ಸರ್ವವು ತೊರೆದು ಶ್ರೀ ಪುರಂದರವಿಠ್ಠಲನಾ
ಪುರಂದರವಿಠ್ಠಲಾನಾ…ವಿಠ್ಠಲ ನಾ….ಆ…. |
ಸರ್ವವ ತೊರೆದು ಶ್ರೀ ಪುರಂದರವಿಠ್ಠಲನಾ
ನಿರ್ವ್ಯಾಜ್ಯ ಭಕುತಿಯಾ ಬೇಡಿಕೊಂಡ್ಯಲ್ಲದೆ ||
||ಸೇವಕ||

Lyrics in English

Sevaka tanada ruchi enaledeyo deva hanumaraya vairaagya bedi || sevaka || hanumaa ……..

Udadiya daati seeyeya kandu bandaaga, maduveya maadenna ennabaaraditte | paadadi paashana henna maadidavanige, edu enaashcharyavo nee bayasalollade hode || sevaka ||

Kshanadolo sanjeevana giri tandaaga hana honnu bedalu kodadiddane | vinayada vibhishanage rajyavittaa … | edu enaashcharya hanuma neenollade hode || sevaka ||

Sarvabhoumanu taane mecchi bandaagale poorviya bedalu kodadiddane | sarvavu toredu sri purandara vittalana …. purandara vittalanaa …. vittala naa …. aa….. | sarvava toredu sri purandara vittalanaa nirvyarja bhakutiya bedikondyallade || sevaka ||


ನೆನೆವೆ ನಾನನ್ಯರ ಕಾಣೇನೋ / Neneve naananyara kaaneno

ನೆನೆವೆ ನಾನನ್ಯರ ಕಾಣೇನೋ ||

ಕೊಡುವರೊಳಗೆ ನೀನೆ ಎಂದು ಬಡವನಾಗಿ ನಾನು ಬಂದು |
ಉಡಿಯ ಪಿಡಿದು ಬೇಡಿ ಕೊಂಬೆ ನಾ |
ಉಡಿಯ ಪಿಡಿದು ಬೇಡಿ ಕೊಂಬೆ ಧ್ರಡದಿ ವರವ ಕೊಡುವ ದೊರೆಯ ||
||ನೆನೆವೆ||

ರಾಮದೂತನಾಗಿ ಬಂದು ರಾಮ ಮುದ್ರೆ ಜಾನಕಿಗಿತ್ತು |
ಭೀಮನಾಗಿ ಕರವ ಮುಗಿವನಾ |
ಭೀಮನಾಗಿ ಕರವ ಮುಗಿದು ಜ್ಞಾನ ಪೂರ್ಣ ಪ್ರಾಣ ನೆನಿಪನಾ ||
||ನೆನೆವೆ||

ಈಶ ನಾರಸಿಂಹನಾದ ವಾಸವಾದಿ ವಿನುತ ಶೇಷ ದೋಷ ರಹಿತ ಪುರಂದರನಾ |
ದೋಷ ರಹಿತ ಪುರಂದರ ವಿಠ್ಠಲದಾಸ ಭಾರತೀಶ ನೆನಿಪೆನಾ |
||ನೆನೆವೆ ||

Lyrics in English

Neneve naananyara kaaneno ||

Koduvarolage neene endu badavanaagi naanu bandu | udiya pididu bedi kombe naa | Udiya pididu bedi kombe dhrudadi varava koduva doreya || neneve ||

Raamadootanaagi bandu raama mudre janakigittu | bhimanaagi karava mugivanaa | bhimanaagi karava mugidu jnaana poorna prana nenipanaa || neneve ||

Eesha naarasimhanaada vaasavaadi vinuta shesha dosha rahita purandaranaa | dosha rahita purandara vittaladasa bharateesha nenipanaa || neneve ||


ಗುರು ಪುರಂದರ ದಾಸರೆ / Guru purandara dasare

ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ |
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ || ಗುರು ||

ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ನಂಬಿದೆ |
ಇಂದಿರೇಶನ ಪಾದ ತೋರಿಸೊ | ತಂದೆ ಮಾಡೆಲೊ ಸತ್ಕೃಪೆ
||ಗುರು||

ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ |
ನಾರದರು ಇ ರೂಪದಿಂದಲೀ…| ತೋರೆ ದರ್ಶನ ತೋರಿದೆ || ಗುರು ||

ಅಜಭವಾದಿಗಳರಸನಾದ ವಿಜಯವಿಠಲನ ಧ್ಯಾನಿಪ |
ನಿಜ ಸುಜ್ಞಾನವ ಕೊಡಿಸಬೇಕೆಂದೂ | ಭಜಿಸುವೆನು ಕೇಳ್ ಗುರುವರ ||ಗುರು||

Lyrics in English

Guru purandara dasare nimma charana kamalava nambide | garuva rahitana maadi ennanu poreva bhaaravu nimmade || guru ||

Ondu ariyada mandamati naanindu nimmanu nambide | indireshana paada toriso | tande maadelo satkripe || guru ||

Maarajanakana sannidhaanadi saaragaanava maaduva | naradaru e roopadindali …… | tore darshana toride || guru ||

Ajabhavaadigalarasanaada vijayavittalana dhyaanipa | nija sujnaanava kodisabekendu | bhajisuvenu kel guruvara || guru ||


ಮರೆಯದಿರು ಮರೆಯದಿರು ಮರುಳು Mareyadiru mareyadiru marulu

ಮರೆಯದಿರು ಮರೆಯದಿರು ಮರುಳು ಮನುಜಾ… |
ನಾರಾಯಣನ ಸ್ಮರಣೆಯನು ಮಾಡು ಮನುಜಾ… ||
||ಮರೆಯದಿರು||

ರಂಗನಾಥನು ಇರಲು ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆ ಏಕೆ |
ಅಂಗನೆ ಸತಿ ಇರಲು ಬಣಗು ಹೆಣ್ಣುಗಳೇಕೆ |
ಮಂಗಳಾತ್ಮನಿರಲಿಕ್ಕೆ ಅನ್ಯ ದೈವವೇಕೆ |
||ಮರೆಯದಿರು||

ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆ
ಮೇಲು ನಾಮವಿರಲಿಕ್ಕೆ ಕಟಕು ಇನ್ನೇಕೆ |
ಬಾಲ ಹನುಮನಿರಲಿಕ್ಕೆ ಹುಲ್ಲು ಕಪಿಗಳು ಏಕೆ |
ಮೇಲಾದ ತುಳಸಿ ಇರೆ ಕಗ್ಗೊರಲೆ ಏಕೆ |
||ಮರೆಯದಿರು||

ಚಿನ್ನದ ಗಿರಿ ಇರಲು ಕಬ್ಬಿಣದ ಮೊರಡಿ ಏಕೆ
ರನ್ನ ಮಾಣಿಕವಿರಲು ಗಾಜಿನ ಹರಳೇಕೆ |
ಅನ್ನ ತುಪ್ಪವಿರಲಿಕ್ಕೆ ಮದ್ಯ ಪಾನಗಳೇಕೆ |
ಚೆನ್ನಾದಿ ಕೇಶವನಿರೆ ಮಿನುಗು ದೈವಗಳೇಕೆ |
||ಮರೆಯದಿರು||

Lyrics in English

Mareyadiru mareyadiru marulu manuja …. | narayanana smaraneyanu madu manuja …… || mareyadiru ||

Ranganathanu iralu janguli daivagaleke | tungabhadre iralikke baavi kere eke | angane sati iralu banagu hennugaleke | mangalaatmakaniralikke anya daivaveke || mareyadiru ||

Haalu hallaviralikke vaaliyava taraleke | melu naamaviralikke kataku enneke | baala hanumaniralikke hullu kapigalu eke | melaada tulasi ere kaggorale eke |mareyadiru ||

Chinnada giri eralu kabbinada moradi eke | ranna maanikyaviralu gaajina haraleke | anna tuppaviralikke madya paanagaleke | chennaadi keshavanire minugu daivagaleke || mareyadiru ||


ನಮೋ ನಮೋ ಮಹೇಶ್ವರಿ / Namo namo maheshwari

ಓ..ಓ..ಓ…ಜನನಿ, ಪಾಶಕೋದಂಡಧಾರಿಣಿ
ಸ್ರಿಷ್ಠಿ ಸಂಹಾರಕಾರಿಣಿ ಚಿತ್ತಕ್ಷೋಭವಿಮೋಚಣಿ
ಕೈಲಾಸವಾಸಿನಿ ಮಹಾಲಕ್ಷ್ಮಿ, ಮಹಾದೇವಿ,
ಮಹಾಸರಸ್ವತಿ ರೂಪಿಣಿ
ಶರಣು ಶರಣು ಹೋ ಅಂಬಿಕಾ
ಭ್ರಮರಾಂಬಿಕ.., ಮೂಕಾಂಬಿಕಾ….ಆ..ಆ…
ಮೂಕಾಂಬಿಕಾ. …ಆ…

ನಮೋ ನಮೋ ಮಹೇಶ್ವರಿ ನಮೋ ಭವಾನಿ ಶಂಕರಿ |
ನಮೋ ಮ್ರಢಾನಿ ಈಶ್ವರಿ ನಮೋ ತ್ರಿಲೋಕ ಸುಂದರಿ |
ನಮೋ ನಮೋ ಮಹೇಶ್ವರಿ….||

ಅನಂತ ಭಾಗ್ಯದಾಯಿನಿ ಅನಂತ ಶೋಕಹಾರಿಣಿ
ಅನೇಕ ರೂಪಧಾರಿಣಿ ಅನಂತ ಜ್ಞಾನವಾಹಿಣಿ |
ತ್ರಿಲೋಕವೆಲ್ಲ ಬೆದರಿದೆ ತ್ರಿಲೋಕವಿಂದು ನಡುಗಿದೆ |
ತ್ರಿಲೋಚನಪ್ರಿಯೆ ಕ್ರಪಾಕಟಾಕ್ಷರಿ ನಿ ಕರುಣಿಸು
ಕ್ರಪಾಕಟಾಕ್ಷರಿ ನಿ ಕರುಣಿಸು….ಕರುಣಿಸು… ||
||ನಮೋ ನಮೋ||

ನಿನ್ನಿಂದ ತಾನೆ ಲೋಕವು, ನಿನ್ನಿಂದ ತಾನೆ ನಾಕವು
ನಿನ್ನಿಂದ ದೇವಿ ಎಲ್ಲವು, ಶರ್ವಾಣಿ ನೀನೆ ಪ್ರಾಣವು |
ಅದೇನು ಪಾಪ ನಮ್ಮದು, ಅದೇನು ಕೋಪ ನಿನ್ನದು |
ನಮ್ಮನ್ನು ತಾಯೆ ಮನ್ನಿಸು ನಮ್ಮೆಲ್ಲರನ್ನು ರಕ್ಷಿಸು
||ನಮೋ ನಮೋ||
ನಮ್ಮೆಲ್ಲರನ್ನು ರಕ್ಷಿಸು ಮಾತೆ ಮೂಕಾಂಬಿಕೆ, ತಾಯೇ…..ಭ್ರಮರಾಂಬಿಕೆ

Lyrics in English

O …. O…… janani, paashakodandadharini, srushti samharakarini chittakshobhavimochani | kailasavasini mahalakshmi mahadevi maha saraswatiroopini |sharanu sharanu ho ambikaa, bhramarambika ….. mookambikaa …. aaa .. aa… mookambikaa … aa …

Namo namo maheshwari namo bhavani shankari | namo mrudaani eshwari namo triloka sundari | namo namo maheshwari ….. ||

Ananta bhagyadayini ananta shokaharini | aneka roopadharini anata jnaanavahni | trilokavella bedaride trilokavindu nadugide |trilochanapriye krupakataaksha nee karunisu, krupakataksha nee karunisu ….. karunisu …. || namo namo ||

Ninninda taane lokavu, ninninda taane nakavu | ninninda devi ellavu, sharvani neene pranavu | adenu paapa nammadu, adenu kopa ninnadu | nammannu taaye mannisu nammellarannu rakshisu || namo namo || nammellarannu rakshisu maate mookambike, taaye ….. bhramraambike


ರಾಮ ರಾಮ ರಾಮ ಎನ್ನಿರೋ / Rama rama rama enniro

ರಾಮ ರಾಮ ರಾಮ ಎನ್ನಿರೋ ಇಂಥ ಸ್ವಾಮಿಯ
ನಾಮವ ಮರೆಯದಿರೊ ||
||ರಾಮ ರಾಮ||

ತುಂಬಿದ ಪಟ್ಟಣಕ್ಕೆ ಒಂಭತ್ತು ಬಾಗಿಲು
ಸಂಭ್ರಮದರಸರು ಐದು ಮಂದಿ |
ಢಂಬಕತನದಿಂದ ತಿರುಗುವ ಕಾಯದಿ
ನಂಬಿ ನೆಚ್ಚಿ ನೀವು ಕೆಡಬೇಡಿರೊ
||ರಾಮ ರಾಮ||

ನೆಲೆಯಿಲ್ಲದೀಕಾಯ ಎಲುಬಿನ ಪಂಜರ
ಹೊಲಿದು ಸುತ್ತಿದ ಚರ್ಮದ ಹೊದಿಕೆ ||
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವನೆಚ್ಚಿ ಕೆಡಬೇಡಿರೊ
||ರಾಮ ರಾಮ||

ಹರಬ್ರಹ್ಮ ಸುರರಿಂದ ವಂದಿತನಾಗಿರ್ಪ
ಹರಿಸರ್ವೋತ್ತಮನೊಬ್ಬ ಕಾಣಿರೊ ||
ಪುರಂದರ ವಿಠಲನ ಭಜನೆಯ ಮಾಡಿರೊ
ದುರಿತ ಪರ್ವತವೆಲ್ಲ ಪರಿಹಾರವೊ
||ರಾಮ ರಾಮ||

Lyrics in English

Rama rama rama enniro intha swamiya naamava mareyadiro || rama rama ||

Tumbida pattanakke ombattu baagilu sambhramadarasaru idu mandi | dhamkatanadinda tiruguva kaayadi, nambi necchi neevu kedabediro || rama rama ||

Neleyilladeekaaya elubina panjara holidu suttida charmada hodike | mala mutrangalu keevu krimigalinda bharita dehavanecchi kedabediro || rama rama ||

Harabrahma surarinda vanditanaagirpa hari sarvottamanobba kaaniro | purandara vittalana bhajaneya maadiro durita parvatavella parihaaravo || rama rama ||


ಭಕುತ ಜನಾ ಮುಂದೆ ನೀನವರ / Bhakuta jana munde neenavara

ಭಕುತ ಜನಾ ಮುಂದೆ ನೀನವರ ಹಿಂದೆ | ಯುಕುತಿ ಕೈಗೊಳ್ಳದೂ
ಗಯಾಗದಾ ಧರನೆ |
||ಭಕುತ||

ಕಟ್ಟೆರಡು ಬಿಗಿದು ನದಿ ಸೂಸಿ, ಹರಿಯುತ ಬರಲು
ಕಟ್ಟಲೆಯಿಂದ ಹರಿಗೋಲು ಹಾಕಿ |
ನೆಟ್ಟನೆ ಆಚೆಗೀಚೆಗೆ ಹೋಗಿ ಬರುವಾಗ | ಹುಟ್ಟು ಮುಂದಲ್ಲದೆ
ಹರಿಗೋಲು ಮುಂದೇನು ||
||ಭಕುತ||

ತಾಳೆ ಹೆಗ್ಗಾಳೆ ದುಂಧುಭಿ ಭೇರಿ ತಮಟೆ | ನಿಸ್ಸಾಳೆ ನಾನಾವಾದ್ಯಗಳು
ಭೂಷಣಗಳು | ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ |
ಆಳು ಮುಂದಲ್ಲದೆ ಅರಸು ತಾ ಮುಂದೆ ||
||ಭಕುತ||

ಉತ್ಸವ ವಾಹನ ಬೀದಿಲಿ, ಮೆರೆಯುತ ಬರಲು
ಸತ್ಸಂಗತಿಗೆ ಹರಿದಾಸರಲ್ಲದೆ |
ವತ್ಸ ಸಿರಿ ವಿಜಯವಿಠ್ಠಲ ವೆಂಕಟಾಚಲ | ವತ್ಸ ಮುಂದಲ್ಲದೆ
ಧೇನು ತಾ ಮುಂದೇನು ||
||ಭಕುತ||

Lyrics in English

Bhakuta jana munde neenavara hinde | yukuti kaigollado gaya gadhaadharane || bhakuta ||

Katteradu bigidu nadi soosi, hariyuta baralu kattaleyinda harigolu haki | nettane achegeechege hogi baruvaaga | huttu mundallade harigolu mundenu || bhakuta ||

Taale heggaale dundhubhi bheri tamate | nissaale nanavaadyagalu bhushanagalu | saalagi balivididu sambhramadi baruvaaga | aalu mundallade arasu taa munde || bhakuta ||

Utsava vaahana beedili, mereyuta baralu satsangatige haridasarallade | vatsa sisri vijayavittala venkatachala | vatsa mundallade dhenu taa mundenu || bhakuta ||


ಶಕ್ತಿ ಸ್ವರೂಪಿಣಿ ಮೂಕಾಂಬಿಕೆ / Shakti swaroopini mookambike

ಶಕ್ತಿ ಸ್ವರೂಪಿಣಿ ಮೂಕಾಂಬಿಕೆ ಅಚಲವು ನಿನ್ನಲ್ಲಿ ಈ ನಂಬಿಕೆ|ಅನಂದದಾಯಿನಿ ಅಂಬಿಕೆ ನಮಿಸುವೆ ನಿನ್ನ ಪಾದಕೆ ||

ಮೂಕಾಸುರನ ವಧೆ ಮಾಡಲೆಂದು, ಮೂರ್ತಿಯನೆತ್ತಿಹೆ ಭುವಿಯಲ್ಲಿ | ಮಂಗಳ ತರಲು ಭಕ್ತರಿಗೆಲ್ಲ ನೆಲೆಸಿದೆ ಕೊಲ್ಲೂರ ಮಣ್ಣಿನಲಿ ||

ಲಕ್ಷ್ಮಿ ಸರಸ್ವತಿ ಪಾರ್ವತಿ ಮೂವರ ಅಂಶವು ನಿನ್ನಲೇ ಸೇರಿಹದು| ಭುವನತ್ರಯವು ಪರವಶವಾಗಿ ನಿನ್ನಯ ಕೀರ್ತಿಯ ಹಾಡಿಹದು | ಹ್ರೀಂಕಾರ ರೂಪಿಣಿ ದಾಕ್ಷಾಯಿಣಿ ನಮ್ಮನು ಕಾಪಾಡು ನೀ | ನಾದ ವೇದಪ್ರಿಯೆ ದಾಕ್ಷಾಯಿಣಿ ನಮ್ಮನು ಕಾಪಾಡು ನೀ ||

Lyrics in English

Shakti swaroopini mookaambike, achalavu ninnalli e nambike | anandadaayini ambike namisuve ninna padake ||

Mookaasurana vadhe maadalendu, moortiyanettihe bhuviyalli | mangala taralu bhaktarigella neleside kollura manninali ||

Lakshmi saraswati parvati moovara amshavu ninnale serihudu | bhuvanatrayavu paravashavagi ninnaya keertiya hadihadu | hreemkaara roopini daakshayini nammanu kaapadu nee | naada vedapriye daakshayani nammanu kaapadu nee ||


ಕಂಗಳ ಮುಂದೆ ಕಂಗೊಳಿಸುತಿದೆ / Kangala munde kangolisutide

ಕಂಗಳ ಮುಂದೆ ಕಂಗೊಳಿಸುತಿದೆ ಮಂಗಳ ಉಡುಪಿ ಕೃಷ್ಣನ ಮೂರುತಿ ||

ಅಂಗಳದಿ ಜನನಿಯು ಮೊಸರನು ಕಡೆದಿರೆ | ಚಂಗನೆ ಬಂದು ಅಪ್ಪಿದ ಮೂರುತಿ | ಅಂಗನೆಯರು ತಾ ನೀರಿಗೆ ಬಂದರೆ | ಸಂಗಡಿಗರೊಡನೆ ತಾ ಕಾಡಿದ ಮೂರುತಿ ||

ದ್ವಾರಕಾಪುರದಲಿ ದೇವಕಿ ದೇವಿಗೆ | ಬಾಲಕ ರೂಪದಿ ತೋರಿದ ಮೂರುತಿ | ಅಷ್ಟಮಠಗಳ ಯತಿಗಳ ಪೂಜೆಯ |ಕಂಗೊಳಿಸುವ ಕರುಣಾಮಯ ಮೂರುತಿ ||

ಪುರಂದರದಾಸರು ಹಾಡಿ ಹೊಗಳಿದ |ಪರಮಪುನೀತ ಚಿನ್ಮಯ ಮೂರುತಿ | ಭಕುತ ಕನಕನ ಮೊರೆಯನು ಕೇಳಿ | ಪಶ್ಚಿಮಕೆ ಮೊಗವ ತಿರುಗಿದ ಮೂರುತಿ ||

Lyrics in English

Kangala munde kangolisutide mangala udupi krishnana muruti ||

Angaladi jananiyu mosaranu kadedire | changane bandu appida mooruti |anganeyaru taa neerige bandare | sangadigarodagoodi taa kaadida mooruti ||

Dwaarakaapuradali devaki devige | baalaka roopadi torida mooruti | aahtamatagala yatigala poojeya | kangolisuva karunaamaya mooruti ||

Purandaradasaru haadi hogalida | paramapunita chinmaya mooruti | bhakuta kanakana moreyanu keli | pashchimake mogava tirugida mooruti ||


https://youtu.be/AxPTahm-fzU