ಗಜಾನನ ಗಜಾನನ ಗಜಾನನ ಸ್ವಾಮಿ/ Gajanana gajanana gajanana swami

ಗಜಾನನ ಗಜಾನನ | ಗಜಾನನ ಸ್ವಾಮಿ ನಿನ್ನವನಾ ||ಪ||

ಪಾರ್ವತಿನಂದನ ಪೂರ್ವಚರಿತ ಘನ ನಿರ್ವಿಘ್ನದಾಯಕ ಗಜಾನನ ||೧||

ಮೂಷಕವಾಹನ ದೋಷಕರಿಪು ಕುಲ ನಾಶಕ ವಿಘ್ನಹ ಗಜಾನನ ||೨||

ಮದನಾರಿ ಮನೋಭವ ಹೃದನಾಮ ಲೇಕದಂತ ದಯಾಸದನ ಶ್ರೀ ಲಂಬೋದರ ||೩||

ಕರುಣಾಪೂರಿತ ಸರ್ವಾಭರಣ ಭೂಷಿತ ಭಯ ಹರಣ ತ್ರಿಜಗನುತ ಗಜಾನನ ||೪||

ವಂದಿಪ ಶರಣರಿಗೆಂದೆಂದು ವಿದ್ಯೆಗಳ ತಂದಿದಿರಿಡುತಿಹೆ ಗಜಾನನ ||೫||

ತಂದೆ ಮಹಿಪತಿ ನಂದನ ಸಾರಥಿ ಇಂದೆಮ್ಮ ಉದ್ಧರಿಸೋ ಗಜಾನನ ||೬||

Lyrics in English

Gajanana gajanana | gajanana swami ninnavana ||pa|| 

Parvatinandana purvacharita gana nirvignadayaka gajanana ||1|| 

Mushakavahana doshakaripu kula nashaka vignaha gajanana ||2||

Madanari manobava hrudanaama lekhadanta dayasadana sri lambodara ||3||

Karunapurita sarvabharana bushita bhaya harana trijaganuta gajanana ||4|| 

Vandipa sharanarigendendu vidyegala tandidiridutihe gajanana ||5|| 

Tande mahipati nandana sarathi indemma uddhariso gajanana ||6||


ನಮೋ ನಮೋ ಗಣೇಶ ನಮೋ /Namo namo ganesha

ನಮೋ ನಮೋ ಗಣೇಶ ನಮೋ ನಮೋ ಸಂಕಟನಾಶ ||ಪ||

ಸಿಂಧುಧರ ಚರ್ಚಿತ ಸಿಂಧೂರ ವದನ ಸುಂದರ ಗುಣಸದನ ||೧||

ತ್ರಿಶೂಲ ಅಂಕುಶ ದೃತಕರ ಕರುಣಾ ಕಿಸಲಯೋಪಮ ಚರಣ ||೨||

ಮಹಿಪತಿ ಸುತಪ್ರಭು ವಿಮಲೇಕದಂತ ಇಹಪರ ಸುಖದಾತ ||೩||

Lyrics in English

Namo namo ganesha namo namo sankatanaasha ||pa||

Sindhudhara charchita sindhuravadana sundara gunasadana ||1||

Trishula ankusha drutakara karunaa kisalayopama charana ||2||

Mahipati sutaprabhu vimalekadanta ihapara sukadaata ||3||


ಮೋದಕ ಪ್ರಿಯನ ಗಜಾನನ /Modaka priyana gajanana

ಮೋದಕ ಪ್ರಿಯನ ಗಜಾನನ |
ಪಾಶಾಂಕುಶಧರ ಮೂಷಿಕವಾಹನ |
ಗಿರಿಜಾನಂದನ ದುರಿತನಿವಾರಣ ||

ಸಕಲವಿದ್ಯೆಯ ಬಲ್ಲ ಸಂಕಟನಾಶ |
ಅಕಳಂಕಚರಿತನ ಸುತ ಗಣೇಶ || ಪಂಕಜಾಸನಪ್ರಿಯ ಕಳೆಯೋ ಮನಕ್ಲೇಶ |
ಅಕ್ಕರದಿ ದಯಪಾಲಿಸೋ ಮನಹರುಷ ||1||

ಶುಕ್ಲಾಂಬರಧರ ಸಿದ್ಧಿವಿನಾಯಕ |
ಲೀಲಾಮಹಿಮನೇ ಮಂಗಳದಾಯಕ |ಸುಲಲಿತಮಹಿಮನೇ ಶರಣು ಸುಬೋಧಕ |
ಲೀಲೆಶರಧಿಯ ತೋರೋ ಭಕ್ತಸುಧಾರಕ ||2||

ಅಂಬರಾಧೀಶ್ವರ ಗೌರಿಕುಮಾರ |
ಲಂಬೋದರ ಭವವಿಘ್ನವಿದೂರ |ಅಭಿನವಜನಾರ್ದನವಿಠಲ ಉದಾರ |
ಅಭಯಹಸ್ತಧೀರ ದಯಾಸಾಗರ ||3||

Lyrics in English

Modaka priyana gajanana
pashankushadhara mooshika vahana
girija nandhana dhooritha nivaarana||

Sakala vidhyaya balla sankata naasha
akalanka charithana sudha ganeshana
pankajasana priya kaleyo mana klesha
akkaradhi daya paaliso mana harusha||1||

Shuklambaradhara siddhi vinayaka
leela mahimane mangala dhaayaka
sulaleetha mahimane sharanu shubhodhaka leele sharadhiya thoro baktha sudhaaraka||2||

Ambareshwara gowri kumara
lambodhara bava vignava vidhura
abhinava janaradhana vittala udhara
abhaya hastha dheera daya saagara||3||


ರಜತಾದ್ರಿ ನಿಲಯನ ರಜನೀಶ /Rajataadri nilayana rajanisha

ರಜತಾದ್ರಿ ನಿಲಯನ | ರಜನೀಶ ಧರನ ತೋರೆ ಪಾರ್ವತಿಯೆ||pa||

ಪಂಚಾನನ ಶಂಕರನ | ಶ್ರೀ ಹರಿ ಮಂಚ ಪದವ ಪಡೆದವನ
ಪಂಚಬಾಣ ಮದಹರನ ಉರು ವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ ||1||

ನಂದಿ ಸುಶ್ಯಂದನ ಶಿವನ | ಗರಳ ಕಂಧರ ತ್ರಿಪುರಾಂತಕನ |
ಮಂದಾಕಿನಿಧರ ಭುವನ ಸುರವೃಂದ ವಿನುತ ನಗಚಾಪಭವನ ತೋರೆ ಪಾರ್ವತಿಯೆ ||2||

ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕನ ವಾಮದೇವ ಮುನಿಸುತನ | ಶ್ರೀವರ ಶಾಮಸುಂದರನ ಸಖನ ತೋರೆ ಪಾರ್ವತಿಯೆ ||3||

Lyrics in English

Rajataadri nilayana rajanisha dharana |
Tore paarvatiye || pa ||

Panchaanana shankarana shreehari |
Manca padavi padedavana |
Panca baana madaharanaa | guru |
Virinci kuvara doorvaasa shukana || 1 ||

Nandi sushyandana shivanaa | gara |
Kandhara tripuraantakanaa |
Mandaakinidhara bhuvana suraa |
Vrundavinuta nagachaapa dharanaa || 2 ||

Saamaja charmaambaranaa | shubha |
Kaamita phaladaayakanaa |
Vaamadeva muni sutanaa shreevara |
Shyamasudarana premada sakhanaa || 3||


ಪಾಲಯ ಪಾಲಯ ಪಾರ್ವತಿ ತನಯ/Palaya palaya parvati

ಪಾಲಯ ಪಾಲಯ ಪಾರ್ವತಿ ತನಯ ಪಾಶಾಂಕುಶ ಧರ ಜೀಯಾ ಜಯ ||ಪ||

ಪುರಹರ ಹರಸುತ ಸ್ಮರಿಸುವೆ ನಿನ್ನನು ಕರುಣದಿ ಮತಿಗಳ ನೀಡೋ ಜಯ ||೧||

ಬಾದರಾಯಣ ಸುತ ಭಾರತ ಲೇಖಕ ಭಾವಿಪೆ ನಿನ್ನನು ಜೀಯಾ ಜಯ ||೨||

ಸುಂದರ ಗಣಪತಿ ಬಂದ ವಿಘ್ನವ ಕಳೆ ಇಂದಿರೇಶನ ಬೇಗ ತೋರೋ ಜಯ ||೩||

Lyrics in English

Palaya palaya parvati tanaya pashankusha dhara jiya jaya ||pa||

Purahara harasuta smarisuve ninnanu karunadi matigala nido jaya ||1||

Badarayana suta barata lekhaka bhavipe ninnanu jiya jaya ||2||

Sundara ganapati banda vignava kale indireshana bega toro jaya ||3||


ಆರಂಭದಲಿ ನಮಿಪೆ ಬಾಗಿ ಶಿರವ / Arambhadali namipe baagi

ಆರಂಭದಲಿ ನಮಿಪೆ ಬಾಗಿ ಶಿರವ |ಹೇರಂಬ ನೀನೊಲಿದು ನೀಡೆಮಗೆ ವರವ ||ಪ||

ದ್ವಿರದವದನನೆ ನಿರುತ ದ್ವಿರದವರದನ ಮಹಿಮೆ ಹರುಷದಲಿ ಕರಜಿಹ್ವೆ ಎರಡರಿಂದ |ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು ಕರುಣದಿಂದಲಿ ಎನ್ನ ಕರ ಪಿಡಿದು ಸಲಹೆಂದು ||೧||

ಕುಂಭಿಣಿಜೆ ಪತಿರಾಮ ಜಂಬಾರಿ ಧರ್ಮಜರು ಅಂಬರಾಧಿಪ ರಕುತಾಂಬರನೆ ನಿನ್ನ || ಸಂಭ್ರಮದಿ ಪೂಜಿಸಿದರೆಂಬ ವಾರುತೆ ಕೇಳಿ | ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ ||೨||

ಸೋಮಶಾಪದ ವಿಜಿತ ಕಾಮ ಕಾಮಿತದಾತ ವಾಮದೇವನ ತನಯ ನೇಮದಿಂದ || ಶ್ರೀ ಮನೋಹರನಾದ ಶ್ಯಾಮಸುಂದರ ಸ್ವಾಮಿ | ನಾಮ ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||೩||

Lyrics in English

Arambhadali namipe baagi shirava |heramba ninolidu nudemage varava ||pa||

Dviradavadanane niruta dviradavaradana mahime |harushadali karajihve eradarinda |baredu paaduvudakke baruva vighnava taridu karunadindali enna kara pididu salahendu ||1||

Kumbhinije patiraama jambaari dharmajaru ambaraadhipa rakutaambarane ninna || sambhramadi pujisidaremba vaarute keli | hambalava salisendu nambi ninnadigalige ||2||

Somashaapada vijita kaama kaamitadaata vaamadevana tanaya nemadinda || shri manoharanaada shyaamasundara swami | naama neneyuva bhaagya premadali kodu endu ||3||


ಸಿಂಹರೂಪನಾದ ಶ್ರೀಹರಿ ಶ್ರೀ ನಾಮ /Simharupanada srihari 

ಸಿಂಹರೂಪನಾದ ಶ್ರೀಹರಿ ಶ್ರೀ ನಾಮ ಗಿರೀಶನು ||ಪ||

ಒಮ್ಮನದಿಂದಲಿ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯ್ವೆನೆಂಬ ಹರಿ ||ಅಪ||

ತರಳನು ಕರೆಯೆ ಸ್ತಂಭವ ಬಿರಿಯೇ | ತುಂಬ ಉಗ್ರವನು ತೋರಿದನು || ಬಗೆದನು ಕರುಳನು ಕೊರಳೊಳಗಿಟ್ಟನು | ತರಳನ ಸಲಹಿದ ಶ್ರೀ ನರಸಿಂಹ ||೧||

ಭಕ್ತರೆಲ್ಲ ಕೂಡಿ ಬಹುದೂರ ಓಡಿ ಪರಮ ಶಾಂತವನು ಬೇಡಿದರು ಕರೆದರು ಸಿರಿಯನು ತೊಡೆಯೊಳಗಿರಿಸಿದ | ಪರಮ ಹರುಷವನು ಪೊಂದಿದ ಶ್ರೀ ಹರಿ ||೨||

ಜಯ ಜಯ ಜಯ ಎಂದು ಹೂವನು ತಂದು ಹರಿ ಹರಿ ಹರಿ ಎಂದು ಸುರರೆಲ್ಲ ಸುರಿಯೆ ಭಯ ನಿವಾರಣ ಭಾಗ್ಯ ಸ್ವರೂಪನೆ ಪರಮ ಪುರುಷ ಶ್ರೀ ಪುರಂದರ ವಿಠಲ ||೩||

Lyrics in English

Simharupanada srihari sri nama girishanu ||pa|| 

Ommanadindali nimmanu bajisalu sammatadindali kayvenemba hari ||apa|| 

Taralanu kareye stambava biriye |tumba ugravanu toridanu ||bagedanu karulanu koralolagittanu |taralana salahida Sri narasimha ||1|| 

Baktarella kudi bahudura odi parama santavanu bedidarukaredaru siriyanu todeyolagirisida |parama harushavanu pondida sri hari ||2|| 

Jaya jaya jaya endu huvanu tanduhari hari hari endu surarella suriyebaya nivarana bhagya svarupane parama purusha srI purandara vithala ||3||