ಪಾದ ಕಂಡು ಪಾವನಾದೆನೋ /Paada kandu pavanadeno

ಪಾದ ಕಂಡು ಪಾವನಾದೆನೋ ಶ್ರೀಗಿರಿಯ ನಿಲಯನ ||ಪಾದ ಕಂಡು ಪಾವನಾದೆನೋ

ಪಾದ ಕಂಡು ಪಾವನಾದೆನೊ ಮಾಧವನ ಪ್ರಸಾದ ಪಡೆದೆನೋ
ಹಾದಿ ಕಾಣದೆ ಪರಮ ದುರ್ಭವ ಭಾದೆಯೊಳು ಬಿದ್ದು ತೊಳಲಿ ಬಳಲುತ
ಮೇಧಿನಿಯೊಳು ಜನುಮತಾಳಿ ಭೇದ ಮತದ ಹಾದಿ ಬಿಟ್ಟೂ ||ಪಾದ ಕಂಡು||

ನೀಲ ಬಣ್ಣದೊಪ್ಪುವ ಸುಂದರ ಶುಭ ಕಾಯೆ ಇಂದಿರೆ
ಲೋಲ ತ್ರಿಜಗನ್ಮೋಹನಾಕಾರ ಕೊರಳಾ ಪದಕ
ಮಾಲ ಕೌಸ್ತುಭ ಮುಕುಟ ಮನಿಹಾರ ರತ್ನದುಂಗುರ
ಕಾಲಲೊಳೆಯುವ ಗೆಜ್ಜೆ ಸರಪಣಿ ಶೀಲ ವೈಷ್ಣವ ನಾಮ ಫಣೆಯಲಿ
ಕಾಲರಕ್ಕಸ ಕುಲ ಸಂಹಾರನ ಪಾಲಸಾಗರ ಕನ್ಯೆ ವರಣ
ಫಾಲಮೂಲೋಕ ಸಾರ್ವಭೌಮನ ಮೇಲುಭೂವೈಕುಂಠದಲ್ಲೀ…
ಶ್ರೀನಿವಾಸನ ಪಾದ ಕಂಡು ಪಾವನಾದೆನೋ
ವೆಂಕಟೇಶನ ಪಾದ ಕಂಡು ಪಾವನಾದೆನೋ ||

ಉಟ್ಟಧುಕೂಲ ಶಲ್ಯಜರತಾರ ಕೈಯಲ್ಲಿ ಕಂಕಣ
ಪಟ್ಟ ರತ್ನದ ನಡುವಿಗುಡಿಧಾರ ವರ್ಣಿಸುವರಾರು ಸ್ರಷ್ಟಿಯೊಳಗೀತ
ಮೀರಿದವತಾರ ಇನಕೋಟಿ ಪ್ರಭಾಕರ
ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ
ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸು ಕೊಳ್ಳುವ
ದುಷ್ಟಭ್ರಷ್ಟ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನಾ…ಆ…
ಪಾದ ಕಂಡು ಪಾವನಾದೆನೋ ನಮ್ಮ ಶ್ರೀನಿವಾಸನ
ಪಾದ ಕಂಡು ಪಾವನಾದೆನೋ ||

ಒಂದೇ ಮನದಲಿ ಸಕಲ ಸೇವಕರು ಭಯ ಭಕುತಿಯಿಂದ
ಬಂದು ಹರಕೆಯ ತಂದು ನೀಡುವರು ತುಂಬುರ ನಾರದರೊಂದಿಗಾನದಿಂ
ಪಾಡಿ ಪೊಗಳುವರು ಆನಂದ ಕೋರುವರು
ಹೊಂದಿ ಭಜಿಸುತ ಸಪ್ತಋಷಿಗಣ ಬಂದು ಇಳಿವರು ಬಿಡದೆ ಅನುದಿನ
ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ
ಗಂಧಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನಾ…ಆ…
||ಪಾದ ಕಂಡು||

ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ
ಸದಮಲಾಂಗ ಯೌವ್ವನಾಕಾರ ಸುಸಂಧ್ಯಾಕಾಲದಿ
ಮುದುಕನಾಗಿ ಕಾಂಬ ಮನೋಹರ ಬಹು ಮಹೀಮಗಾರ
ಪದುಮ ವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ
ಒದಗಿ ಬಂದ ಭಕುತ ಜನರನು ಸುಜಯದಿಂದ ಕರೆದು ಪ್ರಸಾದ
ಮುದದಿ ನೀಡುತ ಕ್ರಪೆಯತೋರಿ ಸದಮಲ ಸಂಪದವನೀವನಾ
||ಪಾದ ಕಂಡು||

ತೀರದೀತನ ಲೋಕ ಶ್ರಂಗಾರ ಏರಿ ನೋಡಲು
ಹಾರಗಿರಿತುದಿ ಗಾಳಿ ಗೋಪುರ ಮುಂದೆ ನಡೆಯಲು ದಾರಿಯಲಿ
ಕೊಳ್ಳ ಏಳು ವಿಸ್ತಾರ ಪರಮ ಪರಾಧರ
ತೋರುವ ಮಹ ಗುಡಿಯ ಗೋಪುರ ದ್ವಾರ ಚಿಣ್ಣದ ಕಲಶ ಬಂಗಾರ
ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರಯಲೋಸುಗ
ಸೇರಿ ಧಾರುಣಿ ವೈಕುಂಠವೆನಿಸಿದ ಧೀರವೆಂಕಟ ಶ್ರೀಶ ರಾಮನ
ತಿರಮಲೇಶನ ||ಪಾದಕಂಡು||

Lyrics in English

Paada kandu paavanadeno
Shreegiriya nilayana || pa ||

Paada kandu paavanadeno maadhavana prasaada padedeno
haadi kaanade parama durbhava baadheyolu biddu tolali balaluta
medhiniyolu januma taali abhedha matada haadi bittu || a.pa ||

Neelabanna doppuva sundara shubhakaaya indire lola trijaganmohanaakaara
korala padaka maala kaustubha mukuta manihaara ratnadungura
Kaalal holeyuva gejje sarapali sheela vaishnava naama phaneyali kaala rakkasa kula samhaarana paala saagara kanye varana
phaala mooloka saarvabhoumana melu bhoo vaikunta dalli || 1 ||

Udaya kaaladi baalanavataara madhyaanha kaaladi sadamalaangada yauvanaakara susandhyaa kaaladi mudukanaagi kaambha manohara bahu mahimegaara
Paduva vadana madananayya padumavatiya praana priya
odagi banda bhakuta janaranu sudayadinda karedu prasaada
mudadi needuta krupeya dori sadamala sampadava neevana || 2 ||

Uttadukoola shalya jarataara kaiyalli kankana patta ratnada naduvigudidaara varnisuvaraaro shristiyolageeta meeridavataara dinakoti prabhaakara
bittu Vaikunta ihake saagi bettada mele vaasanaagi kottu varagala mooru jagake shettiyandadi kaasu kolluva
dushta bhrastara shishtarellara ishta daayaka dhitta devana || 3 ||

Onde manadali sakala sevakaru bhaya bhakutiyindali bandu harakeya tandu needuvaru
tumburu naarada rondigaanadim paadi pogaluvaru aananda koruvaru
hondi bhajisuta sapta rishigana bandu ilivaru bidade anudina vandya nigamaadi bandu bhajipara kandu goralaagi brahma surarim
gandha parimala kusuma dravyagalinda seveya gomba devana || 4 ||

Teera deetana loka shrungaara yeri nodalu paara giritudi gaali gopura munde nadeyalu daariyali kolla yelu vistaara parama paratara
toruva mahaagudiya gopura dwaara chinnada kalasa bangaara gaaru maadade daasa janaranu taaratamyadi poreyalosuga seridhaaruni Vaikunta venisida Dheera Venkata Shreesha Raamana || 5 ||


ಓಂಕಾರ ನಾದಪ್ರಿಯ ಹೇ/Omkaara nadapriya he

ಓಂಕಾರ ನಾದಪ್ರಿಯ ಹೇ ಗಣಪಾ||2||
ಸಾಕಾರ ವಂದನೆ ಹೇ ಗಣಪಾ
||ಓಂಕಾರ||

ಧಿಮಿಧಿಮಿಧಿಮಿಧಿಮಿ ನಾಟ್ಯ ಸ್ವರೂಪ ನಿನಗಿದೋ ಅರ್ಪಣೆ ಭಕ್ತಿಯ ಧೂಪ
ಹೇ ಪ್ರಭೋ ನಿನಗಿದೋ ನಮ್ಮ ನಮಸ್ಕಾರ||2||
||ಓಂಕಾರ||

ನಗುಮೊಗದಿಂದ ಜಗವನು ನೋಡುತ ಮಂದಹಾಸದಲಿ ಕುಳಿತಿಹ ದೇವಾ
ಅಭಯಹಸ್ತವ ನೀಡಿ ಚೈತನ್ಯ ನೀಡುವ ಭವ್ಯ ಮೂರುತಿ ಹೇ ಗಣನಾಥ
ಧಿಮಿಧಿಮಿಧಿಮಿಧಿಮಿ ನಾಟ್ಯ ಸ್ವರೂಪ ನಿನಗಿದೋ ಅರ್ಪಣೆ ಭಕ್ತಿಯ ಧೂಪ
ಹೇ ಪ್ರಭೋ ನಿನಗಿದೋ ನಮ್ಮ ನಮಸ್ಕಾರ||2||
||ಓಂಕಾರ||

ಸಡಗರದಿಂದ ತೋರಣ ಕಟ್ಟಿ ಭಕ್ತಿಭಾವದಿ ದೀಪವ ಹಚ್ಚಿ
ಪಂಚಕಜ್ಜಾಯದ ನೈವೇದ್ಯವಿತ್ತು ಕರ್ಪೂರದಾರತಿ ನಿತ್ಯವು ಬೆಳಗೀ||ಸಡಗರ||
ಜಯಜಯ ಎನ್ನೋನ ಗಣಪಗೆ ಪೂಜೆಯ ಮಾಡೋಣ||ಜಯ||
ಶರಣು ಶರಣು ಗಣಪಾ ಶರಣು ಶರಣು ಬೆನಕಾ||ಶರಣು||
||ಓಂಕಾರ||

Lyrics in English

Omkaara nadapriya he ganapa ||2 times|| saakara vandane he ganapa ||Omkaara||

Dhimidhimidhimidhimi natya swaroopa ninagido arpane bhaktiya dhoopa he prabho ninagido namma namaskaaara ||2||Omkaara||

Nagumogadinda jagavanu noduta mandahaasadali kulitiha deva | abhaya hastava needi chaitanya needuva bhavya mooruti he gananatha || Dhimidhimidhimidhimi natya swaroopa ninagido arpane bhaktiya dhoopa he prabho ninagido namma namaskaaara ||2||Omkaara||

Sadagaradinda torana katti bhaktibhavadi deepava hacchi panchakajjaayada naivedyavittu karpooradarati nityavu belagi ||sadagara|| jayajaya ennona ganapage poojeya maadona ||jaya|| sharana sharanu ganapa saharanu sharanu benaka ||sharanu|| Omkaara||


ವಂದಿಪೆ ಗಜಮುಖನೆ ನಿನ್ನನು/Vandipe gajamukhane ninnanu

ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆನಂದ ಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ||ಪ||

ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ ||1||

ಪಾಶಾಂಕುಶಧರನೆ ಸುಂದರ ಮೂಷಕವಾಹನನೆ ಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ ||2||

ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆ ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ ||3||

ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆ ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ ||4||

ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ ||5||

Lyrics in English

Vandipe gajamukhane ninnanu chandrashekhara sutanenanda baalana smarane manadolu tandu nilisu edane ||pa||

mangala moorutiye koduvenu tendu baaleya goneya ranganamala katheya maaduve sanga torisu doreye ||1||

Paashankushadharane sundara mooshakavaahanane poshisu bhaktarane harikathe bhasheli nudisuvane ||2||

Paarvati pankajane vighnagalaahrisi paalipane maarajanaka bhajane maaduve torisu maargavanu ||3||

Bharata baredavane vyasara bhashitadiledavane maarajanaka bhajane maaduve torisu maargavane ||4||

Indireshana bhajaka ninnanu tandu manadi tooka anandadi dina vaara maalpudu sundara suraloka ||5||


ನಗೆಯು ಬರುತಿದೆ ಎನಗೆ/Nageyu barutide enage

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು ।। ನಗೆಯು ।।

ಪತಿಯ ಸೇವೆ ಬಿಟ್ಟು ಪರರ
ಪತಿಯ ಕೂಡ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು ।। ನಗೆಯು ।।

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಣಿಸುವವರ ಕಂಡು ।। ನಗೆಯು ।।

ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಸ್ವಾಮಿ ಪುರಂದರವಿಠಲನಾಮ
ನೆನೆವ ಮನುಜರನ್ನು ಕಂಡು ।। ನಗೆಯು ।।

Lyrics in English

Nageyu barutide enage nageyu barutide | jagadoliruva manujarella hagaranava maaduvudu kandu || Nageyu ||

Patiya seve bittu parara patiya kooda sarasavaadi | satata maiya toledu halavu vrutava maalpa satiya kandu ||nageyu||

parara vaniteyolumegolidu harushadinda avala beredu hariva neerinolage mulugi berela enisuvavara kandu ||nageyu||

Kaama krodha manadolittu ttanu vishada punjanaagi swami purandara vittalanaama neneva manujarannu kandu ||nageyu||


ನಡೆದು ಬಾರಯ್ಯಾ ಭವ /Nadedu barayya bhava

ನಡೆದು ಬಾರಯ್ಯಾ |ಭವ ಕಡಲಿಗೇ ಕುಂಭಸಂಭವಾ…||2||

ಸಡಗರದಿಂದ ಮೆಲ್ಲಡಿಯನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರೊಡಗೂಡಿ
ತಡಮಾಡದೆ ಬಾ ಮೃಡಸಖ ವೆಂಕಟ … ನಡೆದು
||ನಡೆದು||

ವಿಜಯದಶಮಿ ಆಶ್ವಿಜ ಶುಧ್ಧ ಮಾಸದಲ್ಲಿ
ನಿಜರಥಾರೂಢನಾಗಿ ಸುಜನರಿಂದೊಡಗೂಡಿ
ಗಜಸಿಂಹ,ಮಯೂರ,ಧ್ವಿಜಸಿಂಗ,ಸಾರಂಗ
ಮಜಬಾಪುರೆ ಎನಲು ತ್ರಿಜಗವು ತಲೆದೂಗೇ…ಏ…ಏ…
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ
ಗಜಮುಖನಯ್ಯ ನಿಜಾನಂದದಲಾಡೆ
ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ
ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು||ನಡೆದು ಬಾರಯ್ಯ||

ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸ ಸಮೂಹ
ಒಂದಕ್ಷೋಹಿಣಿ ಬಲ
ನಿನ್ನೂಪೇಕ್ಷೆ ಮಾಡುತಲಿರೆ
ಪಕ್ಷಿವಾಹನಣೆ ಅ ಕ್ಷಣದಲ್ಲಿ ,ಖಳರ ಶಿಕ್ಷಿಸಿ
ಸುಜನರ ರಕ್ಷಿಸಿ ಮೆರೆದಯಾ…ಆ….
ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ
ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ…..
||ನಡೆದು ಬಾರಯ್ಯ||

ಪರಿಪರಿಯಿಂದಲಿ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದೆ ಗರ್ವವು ಯಾಕೊ
ಕರಿರಾಜ ಮೊರೆಯಿಡೆ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ…ಓ…ಓ..
ಶರಣಾಗತ ರಕ್ಷಕ ಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಗೋಪಾಲ ವಿಠ್ಠಲರಾಯ. ..ಆ..||2||
||ಗರುಡ||
ಕರುವಿನಮೊರೆಗಾವು ನೆರೆದಂತೆ ಪೊರೆಯೊ
|| ನಡೆದು ಬಾರಯ್ಯ||

Lyrics in English

Nadedu barayya bhava kadalige kumbhasambhava ||

Sadagaradinda melladiyaniduta bega edabaladali ninna madadiyarodagoodi tadamadade ba mrudasakha venkata … Nadedu||

Vijayadashami ashvija shuddha masadalli nija ratharudhanagi sujanarindarodagudi |
gajasimha mayura dvija singa saranga
maja bhapure enalu trijagavu taleduge ….. ajanu stutiya made rujaganadipa pade
gajamukhanayyanu nijanandadalade
bhujagashreshtanu dvijaraja jayavenne kujanaredeya metti rajatama kaleyuta ||1||

dakshina dikkinalli rakshasa samuha onda
dakshohini bala ninnupekshe madutali
pakshivahananemi ninakshanadi khalara
shikshisi sujanara rakshisi meredayya
takshaka naranannu bhakshisa barutire ikshisi
takshana nelakottide lakshmishane akshaya phaladayaka
kukshiyolage jagarakshipa vishwa ||2||

Paripariyindali karava mugidu stutise
karedare barade garvatanavu yako
kariraja more ide sirige helade bande
kariraja ava ninna kiriyappana maganeno |
sharanagata rakshamani ennuva
birudu bekadare sarasara barayya
garudagamana gopalavithalaraya…..
Karuvina moregavu neredante poreyu ||3||


ತಿಳಿಯದೋ ನಿನ್ನಾಟ ತಿರುಪತಿಯ / Tiliyado ninnata tirupathiya

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|

ಪೊಳೆವ ನೀರೊಳು ಗೆಲುವ ಮೋರೆಯ
ನೆಲವ ನೋಡುವ ಸುಳಿವ ಕಂಬದಿ
ಇಳೆಯನಳೆಯುವ ಭಳಿರೆ ಭಾರ್ಗವ
ಖಳನ ಛೇಧಿಸಿ ಕೊಳಲಧ್ವನಿಗೆ
ನಳಿನಮುಖಿಯರ ನಾಚಿಸುವ ಬಲು
ಹಯದಳದ ಬಹು ಹವಣೆಗಾರನೆ||

ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ |
ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ |
ನೀರೊಳಗೆ ಮನೆ ಭಾರ ಬೆನ್ನಿಲಿ ಕೋರದಾಡೆಯ ನಾರಸಿಂಹನೆ |
ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ |
ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ||

ಸಕಲ ಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು |
ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು |
ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ |
ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ |
ರುಕುಮನನುಜೆಯ ರಮಣ ಬೌದ್ದನೆ ಲಕುಮಿರಮಣನೆ ಕಲ್ಕಿರೂಪಿಯೆ||

ನಿನ್ನ ರೂಪಿನ ಲೀಲಾ ನೋಡುವ ಜನಕೆ ಕಣ್ಣು ಸಾವಿರವಿಲ್ಲ |
ನಾ ಪಾಡಿ ಪೊಗಳಲು ಪನ್ನಗಾಧಿಪನಲ್ಲ ನೀನರಿಯದಿಲ್ಲ |
ಕಣ್ಣುಮುಚ್ಚಿದೆ ಬೆನ್ನು ತೋರುವಿ ಮಣ್ಣು ಕೆದರುವಿ ಚಿಣ್ಣಗೊಲಿದನೆ |
ಸಣ್ಣವಾಮನ ಅಣ್ಣರಾಮನೆ ಪುಣ್ಯಪುರುಷನೆ ಬನ್ನ ಬಡಕನೆ |
ಹೆಣ್ಣುಗಳ ವ್ರತಕೆಡಿಸಿ ತೇಜಿಯ ಬೆನ್ನನೇರಿದ ವ್ಯಾಸವಿಠಲ||

Lyrics in English

Tiliyado ninnata tirupathiya venkata ||pa||

Poleva nirolu geluva moreya nelevanoduva |Suliva kambadi ileyanaliyuva balire bhargava | khalana chedisi kolala dwanige nalinamukhiyara |nachisuva balu hayadalada bahu havanegarane |1|

Aru ballaru nimma shri lakumiya manasige thoruviyo |parabomma ulidavaru ballare nirajasana bomma idu ninna marma |neerolage mane bara bennali koredadiya narasimhane dareya bedida dheera purushane |varibhandana mara janakane nariyara vrata validu |kudureya eri mereyuva sundarangane      ||

Sakala mayavidenu vrikana vayu sakana salahide neenu |bhakuthi indali tutiparige suradhenu sura kama dhenu |nikhila vedodhara giridhara akila bumiya |tanda narahari yukuthiyali nelenalada bhargava |mukuthigosuga phalava savidane rukumananujeya ramana |boudhane lakumi ramanane kalki roopiye ||

Ninna roopina leela noduvajanake kannu saviravilla |na padi pogalalu pannagadipa nalla neenariyadilla |kannu muchchade bennu toruvi mannu kedaruvi | chinna golidane sanna vamana anna ramane | punya purushane banna badakane hennugala vrata |kedisi tejiya bennanerida vyasa vittala ||


ಶ್ರೀನಿಕೇತನ ಪಾಲಯ ಮಾಂ /Shriniketana palayamam

ಶ್ರೀನಿಕೇತನ ಪಾಲಯ ಮಾಂ ಶ್ರೀನಿಕೇತನ ||ಪ||

ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ-
ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ||

ಜ್ಞಾನಮಾನದಾ ಶರಣರ ಸುರ-
ಧೇನು ಸರ್ವದಾ
ನೀನೆಂದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ ||೧||

ಶ್ರೀಕರಾರ್ಚಿತ ಪಾದಾಬ್ಜ ಪರಾಕು ಅಚ್ಯುತ
ಶೋಕನಾಶನ ವಿಶೋಕಜನಕ ಹೃ-
ದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||೨||

ಪನ್ನಗಾಚಲನಿವಾಸ ಪ್ರ-
ಪನ್ನ ವತ್ಸಲ
ಬಿನ್ನಪ ಕೇಳೊ ಜಗನ್ನಾಥವಿಠ್ಠಲ
ಧನ್ಯನ ಮಾಡೊ ಶರಣ್ಯ ಶರಣನಾ ||೩||

Lyrics in English

Shriniketana palayamam ||pa||

Gnana gamya karunaa nidhi
ninnadigaanamisuve pore deena-dayaalu ||p||

Jnyaana-maanada sharanara sarvadaa
neenedarithu sadaanuraagadali dhyaanipe manadanumaanava kaleyo ||1||

Shrikaraarthitha-paadaartha paraaku achyutha
shoakanaashana vishoaka-janaka hrith-vyaakula
kaleyo kripaakar olidu ||2||

Pannagaachala nivaasa prasanna vathsala
binnapa kelo jagannaatha vithala dhanyana maado
sharanya sharananaa ||3||


ಶಂಭೋ ಸ್ವಯಂಭುಸಂಭವ / Shambo svayambhu

ಶಂಭೋ ಸ್ವಯಂಭುಸಂಭವ ನಂಬಿದೆ ಕಾಯೋ
ಜಂಭಾರಿನುತ ಅಭ ||ಪ||

ಅಂಬರಪುರಹರ ಸಾಂಬ ತ್ರಿಯಂಬಕ
ಶಂಬರಾರಿರಿಪು ಗಂಭೀರ ಕರುಣೇ ||ಅಪ||

ಭಸಿತಭೂಷಿತ ಶರೀರ ಭಕ್ತರಾಧಾರ
ವಿಷಕಂಠ ದುರಿತಹರ |ಪಶುಪತಿ ಫಣಿಪಹಾರ ಪಾವನಕರ |ತ್ರಿಶೂಲ ಡಮರುಗಧರ
ನೋಸಲನಯನ ವಿಕಸಿತ ಅಂಬುಜ ಮುಖ
ಶಶಿಧರ ಮೂಕ ರಕ್ಕಸ ಮದಮದ೯ನ
ಘಸಣೆಗೊಳಿಸುವ ತಾಮಸವ ಕಳೆದು ಮಾನಸದಲಿ ರಂಗನ ಬಿಸಜಪಾದವ ತೋರೋ|| ೧||

ರಜತ ಪರ್ವತನಿವಾಸ ನಿರ್ಮಲ ಭಾಸ
ಗಜದೈತ್ಯ ನಾಶ ಗಿರೀಶ |ಸುಜನರ ಮನೂವಿಲಾಸ ವ್ಯೋಮಕೇಶ |ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಗೈಸಿದ
ಅಜಗರ ಮಂದಿರ ಗಜಮುಖ ಜನಕನೆ
ಗಜಗಮನನ ತನುಜನನ್ನು ಕಾಯ್ದವನೆ
ವಜ್ರಮುನಿ ವಂದಿತ ಭಾಜಿಸುವೆ ನಿನ್ನ ||೨||

ಮಧುರಾಪುರಿ ನಿಲಯ ಮೃತ್ಯು೦ಜಯ
ಸದಮಲ ಸುಮನಸಗೆಯ |ಸದಾ ನಮಿಪರ ಹೃದಯಸ್ತ ಚಕ್ಕನಾಥ |ಸದೆ ಪಾಪ ಕೊಡು ಅಭಯ
ಸದಾಶಿವ ಜಾನ್ಹವಿಧರ ಕೃತಮಾಲಾ |ನದಿತೀರದಿ ವಾಸವಾಗಿಪ ಸೌಂದರ್ಯ |ಮಧುರಿಪು ವಿಜಯವಿಠಲ ಪದಾಬ್ಜಕೆ |
ಮಧುಪನೆನಿಪ ಪಂಚವದನ ಕೈಲಾಸ ||೩||

Lyrics in English

Shambo svayambhu sambhava | nanbide kayo jambari nuta bava |pa|

Aambarapura hara samba trayanbaka |sambararipu ganbira karuni | a.pa. |

Basita bushita sharira baktaroddhara vishakantha duritahara |
pasupati panipa hara pavana kari trishula damaruga dhara |
nosalanayana vikasitanbuja mooka shasidhara mata rakkasa mada mardana |
phasanigolipa tamasava kaledu manasadali rangana bisaja padava toro | 1 |

Rajata parvata nivasa nirmala basha gajadaitya nasha girisha |
sujanara mano vilasa vyomakesha trijagadallana gaurisha |
ajasuta nadhvara bajaneya kediside | ajagara mandira gajamuka janakane |
gajagamana | muni tanujara kaydane vrujamuni vandita bajisuve ninnanu | 2 |

Madhurapura nilaya mrutyunjaya sadamala sumanageya |
sada namipara hrudayadolagulla baya sadeyutta kodu abhaya
| sadashiva janhavi dhara krutamala nadi teeradi vaasavagippa |
saundarya madhiripu vijaya vithalana padake madhupanenipa panchavadana kailasada | 3 |


ಗಜವದನ ಪಾಲಿಸೋ/Gajavadana paaliso

ಗಜವದನ ಪಾಲಿಸೋ
ತ್ರಿಜಗದೊಡೆಯ ಶ್ರೀ ಭುಜಗ ಭೂಷಣ   ।।ಪ॥

ಏಸು ದಿನಕೆ ನಿನ್ನ ವಾಸವ ಪೊಗಳುವೆ
ಲೇಸ ಪಾಲಿಸೊ ನಿತ್ಯ ವಾಸವನುತನೆ      ।।೧।।

ಭಕ್ತಿಯೊಳು ಭಜಿಪೆನು ರಕ್ತಾಂಬರಧರ
ಮುಕ್ತಿ ಪಥವೀಯೋ ಶಕ್ತಿ ಸ್ವರೂಪ      . ।।೨।।

ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ
ಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ             ।।೩।।

Lyrics in English

Gajavadana paaliso trijagadodeya sri bhujagabhushana ||pa||

Esu dinake ninna vaasava pogaluve lesa paaliso nitya vaasanutane ||1||

Bhaktiyolu bhajipenu raktambaradhara mukti pathaveeyo shakti swaroopa ||2||

Podaviyolage ninna biduvaraaro ranna kadu harushadi kaayo vijaya vittaladasa ||3||


ಎಂದಿಗಾಹುದೋ ನನ್ನ ದರುಶನ/Endigaahudo ninna

ಎಂದಿಗಾಹುದೋ ನನ್ನ ದರುಶನ          ।।ಪ॥

ಇಂದಿರೇಶ ಮುಕುಂದ ಕೇಶವ              ।।ಅ.ಪ॥

ಗಾನಲೋಲನೆ ದೀನವತ್ಸಲ 
ಮಾನದಿಂದಲಿ ನೀನೆ ಪಾಲಿಸೋ          ।।೧।।

ಯಾರಿಗೆ ಮೊರೆ ಇಡುವೆ ಶ್ರೀಹರಿ 
ಸಾರಿ ಬಂದು ನೀ ಈಗಲೇ ಪೊರಿ          ।।೨।।

ಗಜವ ಪಾಲಿಸೊ ಗರುವದಿಂದಲಿ 
ಭುಜಗಶಯನ ಶ್ರೀ ವಿಜಯವಿಠಲಾ       ।।೩।।

Lyrics in English

Endigaahudo ninna darushana ||pa||

Indiresha mukunda keshava ||a.pa||

Gaanalolane deenavatsala maanadindali neene paalisi||1||

Yaarige more eduve srihari |saari bandu nee eegale pori ||2||

Gajava paaliso garuvadindali | bhujagashayana sri vijayavittala||3||