
ಉದರವೈರಾಗ್ಯವಿದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ ||
ಉದಯಕಾಲದಲೆದ್ದು ಗದಗದ ನಡುಗುತನದಿಯಲಿ ಮಿಂದೆನೆಂದು ಹಿಗ್ಗುತಲಿ ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲಿದ್ದವರಿಗಾಶ್ಚರ್ಯವ ತೋರುವುದೂ ||
ಕಂಚುಗಾರನ ಬಿಡಾರದಂದದಿಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿವಂಚನೆಯಿಂದಲಿ ಪೂಜೆಯ ಮಾಡುವುದು ||
ಕರದಲಿ ಜಪಮಣಿ ಬಾಯಲಿ ಮಂತ್ರವು ಅರಿವೆ ಮುಸುಕು ಮೋರೆಗೆ ಹಾಕಿ ಪರಸತಿಯರ ಗುಣ ಮನದಲಿ ಸ್ಮರಿಸುತಪರಮ ವೈರಾಗ್ಯಶಾಲಿಯೆಂದೆನಿಸುವುದು ||
ಬೂಟಕತನದಲಿ ಬಹಳ ಭಕುತಿ ಮಾಡಿದಿಟನೀತ ಸರಿಯಾರಿಲ್ಲೆನಿಸಿನಾಟಕ ಸ್ತ್ರೀಯಂತೆ ಬಯಲು ಡಂಭವ ತೋರಿ ಊಟದ ಮಾರ್ಗದ ಜ್ಞಾನವಿದಲ್ಲದೆ ||
ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ ಏನಾದರು ಹರಿ ಪ್ರೇರಣೆಯೆಂದು ಧ್ಯಾನಿಸಿ ಮೌನದಿ ಪುರಂದರವಿಠಲನ ಕಾಣದೆ ಮಾಡಿದ ಕಾರ್ಯಗಳೆಲ್ಲವು ||
Lyrics in English
Udara vairagyavidu namma padumanabhanalli lesha bhakutiyilla
Udaya kaladaleddu gada gada naduguta nadiyali mindenendu higgudali mada matsara krodha olage tumbittu kondu badiyaliddavarigashcharyava toruvudu ||udara ||
Kanchugarana bidara dandadi kanchu hittale pratimegala nerahi
mincha bekendu balu jyatigalanu hacchi vanchaneyindali pujeya maduvudu ||Udara||
Karadali japamani bayali mantravu arive musuku morege haki
para satiyara guna manadali smarisuta parama vairagyashali yendenisuvudu ||Udara||
Butaka tanadali bahala bhakuti madi ditanita sari yarillenisi
nataka striyante bayalu dambhava tori utada margada jnanavillade || udara ||
Nanu embudu bittu jnanigalodanadi enadaru hari preraneyendu
dhyanisi maunadi purandara vittalana kanade madida karyagalellavu ||udara||
Youtube link : https://youtu.be/mfrZmqINwPI by Sri Putturu Narasimha Nayak

Good