ಹರಿನಾಮವೇ ಚಂದ /Hari Naamave Chanda

ಹರಿ ನಾಮವೇ ಚೆಂದ ||2||
ಅದ ನಂಬಿಕೋ ಕಂದ ||2||
ಹರಿ ನಾಮವೆ….ಹರಿ ನಾಮವೇ…

ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು||2||
ಮುಂದಿನ ಬದುಕು ಬಂದುರವೆನಿಸೋ ಗುರಿ ಸಾಧಿಸೋ..ಕಂದಾ..
||ಹರಿ ನಾಮವೆ||

ಮಣ್ಣಿನ ಹಾಗೆ ಮಾಗಿಸೆ ಮನವ ,
ಚಿನ್ಮಯನೆಂಬೋ ನಾಮದ ಜಲವಾ….||2||
ಸೇರಿಸಿ ಬೆರೆಸಿ ಮುಕ್ತಿಯಗಳಿಸಿ ಸುಖಿಯಾಗೊ ನೀ..ಕಂದಾ…
||ಹರಿ ನಾಮವೆ||

ಗೋವಿಂದ, ಗೋವಿಂದ, ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು, ತಲೆಕಾವನಯ್ಯ ಬಂದು
ಸಂತನೆಂದು, ಗುಣವಂತನೆಂದು ಭಗವಂತ ನಿನ್ನ ಪೂರೆವ ಧನ್ಯನಾಗೊ ,ಜಗಮಾನ್ಯನಾಗೊ ಧನಸೌಭಾಗ್ಯ ಕೊಡುವ
ಪರಾತ್ಪರ ಹರಿ ವಿಠ್ಠಲಾ…, ಪರಾತ್ಪರ ವರ ವಿಠ್ಠಲಾ…
ವಿಠ್ಠಲಾ……ವಿಠ್ಠಲಾ. …..
ವಿಠ್ಠಲ , ವಿಠ್ಠಲ ಪಾಂಡುರಂಗ, ಜಯ ಹರಿ ವಿಠ್ಠಲ ಪಾಂಡುರಂಗ||2||

Lyrics in English

Hari Naamave Chanda
Ada Nambiko Kanda.. ||2| times||
Hari Naamave Hari Naamave

Hindina Saala Theerisalendu
Bandihevayyaa Janmava Thaledu
||2 times||
Mundina Baduku Bandhuraveniso
Guri Saadhiso.. Kandaa ||hari naamave ||

Mannina Haage Maagise Manavaa
Chinmayanembo Naamada Jalavaa..
||2 times||
Serisi Beresi Mukuthiya Galisi
Sukhkhiyaago Nee Kandaa
Hari Naamave Hari Naamave..

Govinda Govinda Govinda Nendu
Endendu Neenandu Aanandahondu
Thandeyanthe Bandu..
Thalekaavanayya Bandhu
Santanendu Gunavantanendu Bhagavanta Ninna Pooreva
Dhanyanaagu Jagamaanyanaagu Dhana Saubhaagya Koduva
Paraatpara Hari Vittalaa Paraatpara Vara Vithalaa
Vittala.. Vittala..

Vittalaa Vittalaa Paanduraga
Jayi Hari Vittalaa Paanduraga
Vittalaa Vittalaa Paanduraga
Jayi Hari Vittalaa Paanduraga
Vittalaa Vittalaa Jai Jai Vittala |25|


Youtube link : https://youtu.be/lYByL0eywqI from the film Bhaktha kumbaara

ಏನು ಧನ್ಯಳೋ ಲಕುಮಿ /Enu dhanyalo lakumi

ಏನು ಧನ್ಯಳೋ ಲಕುಮಿ
ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳೋ ||ಪ|

ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಮಾಡಿ
ಪೂರ್ಣನೋಟದಿಂದ ಸುಖಿಸುತಿಹಳೋ || ೧||

ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳೋ ||೨||

ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ
ಸರ್ವವಂದ್ಯನಾದ ಪುರಂದರ
ವಿಟ್ಠಲನ್ನ ಸೇವಿಸುವಳೋ ||೩||

Lyrics in English

Enu dhanyalo lakumi yentha maanyalo
saanuraagadinda hariya taane seve maadu tihalu||p||

Koti koti bhrityariralu | haatakaambarana seve |
saatiyillade maadi | poorna notadind sukhisutihalu ||1||

Chatra chaamara vyajana pariyanka | paatra roopadalli nintu |
chitra charitanaada hariya | nitya seve maadutihlu ||2||

Sarvatradi vyaaptanaada | sarva dosharahitanaada |
sarva vandyanaada purandara vittalanna sevisuvalo ||3||


Youtube link : https://youtu.be/5YVckPW2Zjo by Sri Vidyabhushana Theertha Swamiji

ಜಯತು ಜಯ ವಿಠ್ಠಲ /Jayatu jaya vittala

ಜಯತು ಜಯ ವಿಠಲ
ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮ|| ಪ ||

ಪಾವನಾಂಗ ಪಂಡರೀನಾಥ
ಪಾದಸೇವಾ ಪುಣ್ಯವಿನೀತ
ಕರುಣಿಸಿ ಬಾರಯ್ಯ
ದರುಶನ ತಾರಯ್ಯ
ನೀ ಎನ್ನ ಭಾಗ್ಯವಯ್ಯ
ಪಾಂಡುರಂಗ, ಪಾಂಡುರಂಗಯ್ಯ || 1 ||

ಕನಸು ಮನಸಿನ ಜೀವವು ನೀನೆ
ಅಂತರಾತ್ಮನ ಭಾವವು ನೀನೆ
ಅನ್ಯವು ಇಲ್ಲಯ್ಯ
ಎಲ್ಲವು ನೀನಯ್ಯ
ತುಕಾ ಎಂದ ಮಾತಿದಯ್ಯ
ಪಾಂಡುರಂಗ ಪಾಂಡುರಂಗಯ್ಯ || 2 ||

Jayatu jaya vittala | ninna naamavu shanti dhamavu sowkyada raama ||

Paavanaanga pandarinaatha paadaseva punyavineetha | karunisi baarayya darushana taarayya | nee enna bhagyavayya paamduranga, paandurangayya ||1||

Kanasu manasina jeevavu neene antaraatmana bhaavavu neene anyavu ellayya , ellavu neenayya tukaa enda maatidayya panduranga, paandurangayya ||2||


Youtube link : https://youtu.be/a68fkWQbTR8 by Sri P.B.Srininvas

ಬಂದ ಕೃಷ್ಣ ಚಂದದಿಂದ /Bandakrishna Chandadinda

ಬಂದ ಕೃಷ್ಣ ಚಂದದಿಂದ ಬಂದ ನೋಡೆ
ಗೋಪ ವೃಂದದಿಂದ ನಂದಿಸುತ ಬಂಡ ನೋಡೆ ।। ಪ ।।

ಗೋವ ಮೇವ ನೀವ ದೇವ ಬಂದ ನೋಡೆ
ದೇವತಾ ವಾದ್ಯಗಳಿಂದ ಬಂದ ನೋಡ ।। 1 ।।

ಪಾಪಪೋಪ ಕೋಪ ರೂಪ ಬಂದ ನೋಡೆ
ತಾಪಲೋಪ ಲೇಪ ಲೋಪ ಬಂದ ನೋಡೆ ।। 2 ।।

ಭೂಸುರ ಸಖ ಸೂಸುತ ಬಂದ ನೋಡೆ
ವಾಸುದೇವ ವಿಠಲ ತಾ ಬಂದ ನೋಡೆ ।। 3 ।।

Lyrics in English

Bandakrishna Chandadinda banda node| Gopavrundadinda nandisuta banda node ||


Gova meva neeva banda node Devata vadyagalinda banda node ||

Papa popa gopa rupa banda node |tapa lopa lepa lopa banda node ||

Bhusura sakha soosuta banda node vasudeva vittala taa banda node||


Youtube link : https://youtu.be/Vd9dHNUAKLM by Sri Ramakrishna katukukke

ಮುರಳಿಯ ನಾದವ ಕೇಳಿ /Muraliya nadava keli

ಮುರಳಿಯ ನಾದವ ಕೇಳಿ ಬನ್ನಿರಿ ||ಪ||

ಮುರಳಿಯ ನಾದವ ಕೇಳಿ ||ಅ.ಪ||

ಮದುರಾನಾಥನು ಮುರಳಿಯನೂದಲು
ಸುರಿವುದಾನಂದಜಲ ನಯನದಲಿ ||1||

ಕಂಗೊಳಿಸುವ ಬೆಳದಿಂಗಳ ಸೊಬಗಿನಲಿ
ತಂಗಾಳಿಯ ಸುಖದಿ ಶ್ರೀರಂಗನ|| 2||

ಶ್ಯಾಮಲಾಂಗನು ತನ್ನ ಕೋಮಲ ಕರದಲಿ
ಆ ಮುರಳಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು ||3||

ಪಂಚಬಾಣನ ಪಿತ ಮುರಳಿಯ ಮಧುರಸ
ಹಂಚಲೆಮಗೆ ರೋಮಾಂಚವಾಗುವುದು ||4||

ರಜನೀಕಾಂತನ ಕುಲದಲಿ ಜನಿಸಿ
ವ್ರಜಜನಗಳಿಗಧಿಕ ಪ್ರಸನ್ನನ ||5||

Lyrics in English

Muraliya nadava keli banniri ||pa||

Muraliya nadava keli ||a.pa||

Maduranathanu muraliyanudalu
surivudanandajala nayanadali ||1||

Kangolisuva beladingala sobaginali
tangaliya sukadi Srirangana|| 2||

Shyamalanganu tanna komala karadali
A muraliya pidiye hrudayadali
premavu tumbuvudu ||3||

Panchabanana pita muraliya madhurasa
hanchalemage romanchavaguvudu ||4||

Rajanikantana kuladali janisi
vrajajanagaligadhika prasannana ||5||


You can listen to the song here : https://youtu.be/x-kF7whi-ug by Sri Vidyabhushana Theertha Swamiji

ಕೂಸಿನ ಕಂಡಿರಾ /Kusina kandira guru

ಕೂಸಿನ ಕಂಡೀರ್ಯಾ , ಗುರು
ಮುಖ್ಯಪ್ರಾಣನ ಕಂಡೀರ್ಯಾ ||ಪ||
ಬಾಲನ ಕಂಡೀರ್ಯಾ
ಬಲವಂತನ ಕಂಡೀರ್ಯಾ ||ಅ.ಪ ||

ಅಂಜನೆಯುದರದಿ ಪುಟ್ಟಿತು ಕೂಸು
ರಾಮನ ಚರಣಕೆ ಎರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನೆ ಸುಟ್ಟಿತು ಕೂಸು ||

ಬಂಡಿ ಅನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||

ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನುದ್ಧರಿಸಿತು ಕೂಸು
ಮಧ್ವರಾಯರೆಂಬ ಪೆಸರಿನ ಕೂಸು
ಪುರಂದರವಿಠಲನ ಪ್ರೇಮದ ಕೂಸು ||

Lyrics in English

Kusina kandira guru mukhya praanana kandira

Balana kandira balavantana kandira |anupa|

Anjane udaradi janisitu kusu
Ramara padakkeragitu kusu
Sitege ungura kottitu kusu
Lankapuravane suttitu kusu |1|

Bandi annava nungitu kusu
Bakana pranava konditu kusu
Vishada laddugeya medditu kusu
Madadige pushpava kottitu kusu |2|

Mayavellava gedditu kusu
Madhva matavanuddharisitu kusu
Purandaravitthalana dayadinda kusu
Summane udupili nintitu kusu |3|

ಎಂಥಾ ಚೆಲುವಗೆ ಮಗಳನು /Entha cheluvage

ಎಂಥಾ ಚೆಲುವಗೆ ಮಗಳನು ಕೊಟ್ಟನು
ಗಿರಿರಾಜನು ನೋಡಮ್ಮಮ್ಮಾ

ಕಂತುಹರ ಶಿವ ಚೆಲುವನೆನ್ನುತ
ಮೆಚ್ಚಿದನು ನೋಡಮ್ಮಮ್ಮಾ

ಮೋರೆ ಐದು ಮೂರು ಕಣ್ಣು
ವಿಪರೀತವ ನೋಡಮ್ಮಮ್ಮಾ

ಕೊರಳೊಳು ರುಂಡಮಾಲೆಯ
ಧರಿಸಿದ ಉರಗಭೂಷಣನ ನೋಡಮ್ಮಮ್ಮಾ

ತಲೆಯೆಂಬೋದು ನೋಡಿದರೆ ಜಡೆ
ಹೊಳೆಯುತಿದೆ ನೋಡಮ್ಮಮ್ಮಾ

ಹಲವು ಕಾಲದ ತಪಸಿ ರುದ್ರನ
ಮೈ ಬೂದಿಯ ನೋಡಮ್ಮಮ್ಮಾ

ಭೂತ ಪ್ರೇತ ಪಿಶಾಚಿಗಳೆಲ್ಲ
ಪರಿವಾರವು ನೋಡಮ್ಮಮ್ಮಾ

ಈತನ ನಾಮವು ಒಂದೇ ಮಂಗಳ
ಮುಪ್ಪುರಹರನ ನೋಡಮ್ಮಮ್ಮಾ

ಮನೆಯೆಂಬುವುದು ಸ್ಮಶಾನವು ನೋಡೆ
ಗಜ ಚರ್ಮಾಂಬರವಮ್ಮಮ್ಮಾ

ಹಣವೊಂದಾದರು ಕೈಯೊಳಗಿಲ್ಲ
ಕಪ್ಪರವನು ನೋಡಮ್ಮಮ್ಮಾ

ನಂದಿವಾಹನ ನೀಲಕಂಠನ
ನಿರ್ಗುಣನ ನೋಡಮ್ಮಮ್ಮಾ

ಇಂದಿರೆರಮಣ ಶ್ರೀ ಪುರಂದರವಿಠಲನ
ಪೊಂದಿದವನ ನೋಡಮ್ಮಮ್ಮಾ

Lyrics in English

Entha cheluvage magalanu kottanu girirajanu nodam mam ma

Kantuhara shiva cheluvanennuta mecchidanuta nodam mam ma ||entha||

More idu muru kannu viparitava nodam mam ma ||entha||

koralolu runda maleya dharisida uraga bhushanana nodam ma ||entha||

Taleyembodu nididare jade holeyutide nodam mam ma||entha

Halavu kalada tapasi rudrana mai budiyu nodam mam ma||entha||

Bhuta preta pishachigalella parivaravu nodam mam ma

Itana namavu onde mangal muppura harana nodpam mam ma ||enthA||

Mane yembudu smashanavu node gaja charmam bara vam mam ma ||entha||

Hana vondadaru kai yolagilla kapparavanu nodam mam ma||entha||

Nandi vahana nila kantana nirguna nodam mam ma||entha||

Indira ramana shri purandara vittalana hondi davanu nodam mam ma ||entha||

ಬಾರಯ್ಯ ವೆಂಕಟರಮಣ- Barayya venkataramana

ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೇ || ಪ ||

ಬಾರೋ ವಿಶ್ವಂಭರನೇ ಬಾರೋ
ಭಕ್ತರ ಸಲಹುವನೇ ಬಾರೋ || ಅ.ಪ ||

ವೇದಗೋಚರನೇ ಬಾರೋ
ಆದಿಕಚ್ಛಪ ಬಾರೋ
ಮೇದಿನೀ ಸುರರೊಡೆಯನೇ ಬಾರೋ
ಪ್ರಹ್ಲಾದನ ಕಾಯ್ದವನೇ ಬಾರೋ || 1 ||

ವಾಮನ ಭಾರ್ಗವನೇ ಬಾರೋ
ರಾಮ ಕೃಷ್ಣನೇ ಬಾರೋ
ಪ್ರೇಮದಿಂ ಬೌದ್ಧನೆ ಬಾರೋ
ಸ್ವಾಮಿ ಕಲ್ಕಿ ನೀ ಬಾರೋ || 2 ||

ಗುರು ಮಧ್ವಪತಿಯೇ ಬಾರೋ
ವರದ ಕೇಶವನೇ ಬಾರೋ
ಪರಮಾತ್ಮ ನೀನೇ ಬಾರೋ
ಶ್ರೀ ಪುರಂದರವಿಟ್ಠಲನೇ ಬಾರೋ || 3 ||

Lyrics in English

Barayya venkataramana bhaktara nidhiye

Baaro vishwambharane baaro bhaktara salahuvane baaro ||

Veda gochara baro adi kacchapa baro medhini surarodeyane baro prahladana kaydavane baro ||

Vamana bhargavane baro ramakrishane baro premadim buddhane baro swami ni kalki baro||

Guru madhwapatiye baro varada keshavane baro paramaatma neene baro sri purandara vittallane baro||


Youtube link : https://youtu.be/NnMWUZ98TpM by Sri Putturu Narasimha Nayak

ಪವಡಿಸು ಪರಮಾತ್ಮ ಶ್ರೀ / Pavadisu paramathma

ಶ್ರೀ ಎಸ್ ಪಿ ಬಾಲಸುಬ್ರಮಣ್ಯಂ ರವರು ಹಾಡಿರುವ ಸುಮಧುರ ಭಕ್ತಿ ಗೀತೆ

ಆ… ಆ .. ಆ.. ಆ..

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….

ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …

ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
ಆ .. ಆ.. ಆ.. ಆ.. ಆ..
ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ ..

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….

ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
ಅನುಗಾಲ ಈ ಸೇವೆ ಸಾಗುತಲೇ ಇರಲಿ ..
ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ …

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….

Lyrics in English

Aaaa.. aaaaaa.. aaaaa… aaa.. aa aa aaaaaa..

Pavadisu paramathma Shree Venkatesha
Manavemba malligeya hoova haasige mele..

Pavadisu paramathma Shree Venkatesha Sapthagirivaasa….

Raamanige Kousalya laali haadida reeti
Anasuye jogulava haadi nalida reeti…
Raamanige Kousalya laali haadida reeti
Anasuye jogulava haadi nalida reeti…
Ninna mahimeya paadi…… paada seveya maadi….
aa… aaa…. aaa…. aa… aaa… aaaaaa….
Ninna mahimeya paadi…… paada seveya maadi….
Dhanyanaaguvenindu karuniso ….dayamaadi..

Pavadisu paramathma Shree Venkatesha
Manavemba malligeya hoova haasige mele..

Pavadisu paramathma Shree Venkatesha Sapthagirivaasa….

Irulu mugiyade Irali.. hagalu moodade Irali..
anugaala ee seve saagutale irali..
Irulu mugiyade Irali.. hagalu moodade Irali..
Bhakti aritavanalla muktiyu bekilla…
Bhakti aritavanalla muktiyu bekilla…
ninna kaaNade jeeva kshanakaala nilladayya…

Pavadisu paramathma Shree Venkatesha
Manavemba malligeya hoova haasige mele..

Pavadisu paramathma Shree Venkatesha Sapthagirivaasa….
Shree Venkatesha …. Saptha girivaasa….

ಶಾರದೆ ದಯೆ ತೋರಿದೆ /Shaarade daye thoride

ಹ್ರೀಂ ಹ್ರೀಂ ಹ್ರೀಂ ಜಾಪತುಷ್ಠೆ….ಹಿಮರುಚಿ ಮುಕುಟೆ ವಲ್ಲಕಿ ವ್ಯಘ್ರಹಸ್ತೆ
ಮಾತರ್ ಮಾತರ್ ನಮಸ್ತೇ ,ದಹ ದಹ ಜಡತಾಂ ,ದೇಹಿ ಬುದ್ಧಿಂ ಪ್ರಶಾಂತಾಂ
ವಿದ್ಯೆ ,ವೇದಾಂತ ವೇದ್ಯೆ, ಪರಿಣತೆ ಪಠಿತೆ ,ಮೋಕ್ಷದೆ ಮುಕ್ತಿ ಮಾರ್ಗೆ
ಮಾರ್ಗತೀತ ಸ್ವರೂಪೆ ,ಭವಮವ ವರದಾ ,ಶಾರದೆ ಶುಭ್ರಹಾರೆ…………….||

ಶಾರದೆ ದಯೆ ತೋರಿದೆ……ಶಾರದೆ ದಯೆ ತೋರಿದೆ..
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ ||ಶಾರದೆ ದಯೆ ತೋರಿದೇ ೨ ಸಲ ಹಾಡಿ||

ಹಾಲ ಬೆಳಕಿನಲಿ ಬಿಳಿಯ ಕಮಲದಲಿ
ಬಿಳಿಯ ವಸ್ತ್ರವನು ಧರಿಸಿ|
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ
ಬೆಳ್ಳಿ ವೀಣೆಯನು ನುಡಿಸಿ|
ನಿನ್ನ ಕಂಗಳಾ ಬೆಳಕನು
ನನ್ನ ಕಂಗಳಲಿ ತುಂಬಿದೆ || ೨ ಸಲ ||

ಏಳು ಮಗುವೆ ಮೇಲೇಳು ಎನುತ
ಹೊಸ ಬಾಳ ತಂದೆಯಮ್ಮ
ಶಾರದೆ ದಯೆ ತೋರಿದೆ ||೨ ಸರ್ತಿ ||

ಅಂಧಕಾರದಲಿ ನೊಂದು ಬಳಲುತಿರೆ
ಬಂದು ಕೈಯ್ಯ ಹಿಡಿದೇ|
ಕಂದ ಏಕಳುವೆ ಮುಂದೆ ದಾರಿಯಿದೆ
ಎಂದು ನೀನೆ ಕರೆದೆ||

ತಂದೆ ತಾಯಿಯ ಪುಣ್ಯವೋ..
ನಾನೆಂದೋ ಮಾಡಿದ ಪೂಜೆಯೊ..||೨ ಸರ್ತಿ ||
ಇಂದು ನಿನ್ನ ಕೃಪೆಯಿಂದ
ನಾನು ಆನಂದ ಪಡೆದೆನಮ್ಮ….

ಶಾರದೆ ಶಾರದೆ ಶಾರದೆ ಶಾರದೆ… ಶಾರದೇ ….

Lyrics in English

Shaarade daye thoride
Shaarade daye thoride
ninna karuneya kadalalli muttaaade naa muttaaade ||Shaarade daye thoride repeat 2 times||

Haala belakinali biliya kamaladali
biliya vastravanu dharisi
biliya kusumagala maaale koralalire
belli veeneyanu nudisi
ninna kangalaaa belakanu
nanna kangalali thumbide || repeat 2 times||
Yelu maguve melelu yenutha
hosa baala thandeyamma
Sharade daya toride ||repeat twice||

Andhakaaradali nondu balaluthire
bandu kaiyya hidide
Kanda yekaluve munde daariyide
yendu neene karede
tande taayiya punyavo
nanendo maadida poojeyo ||repeat twice ||
indu ninna krupeyinda
naanu ananda padedenamma

Sharade daye thoride… 2 times…

Shaarade, Shaarade , Shaarade……

Youtube link : https://youtu.be/gz2SAwiHR90 from the film Malaya Marutha