ಪೋಗದಿರೆಲೊ ರಂಗ / Pogadirelo ranga

ಪೋಗಾದಿರೆಲೊ ರಂಗ ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ ||ಪ||


ಭಾಗವತರು ಕಂಡು ಭಾಗವತರು ಕಂಡೆತ್ತಿಕೊಂಡೊಯ್ವರು ರಂಗ ||

ಸುರಮುನಿಗಳು ತಮ್ಮ ಹ್ರದಯ ಕಮಲದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷಾದಿಂದಲಿ ನಿನ್ನ ಕರದೆತ್ತಿ ಕೊಂಬುವರು      ||ಪೋಗಾದಿರೆಲೊ ರಂಗ ||

ಅಗಣಿತ ಗುಣ ನೀನಾ ಜಗದನಾರಿಯರೆಲ್ಲಾ
ಹಗೆಯಾಗಿ ನುಡಿದರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲೀತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬುವರು       ||ಪೋಗಾದಿರೆಲೊ ರಂಗ||

ಧಿಟ್ಟ ನಾರಿಯಾರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ನಟ್ಟಿ ತಿರುಗುವಾರೊ
ಸೃಷ್ಟೀಶ ಪುರಂದರ ವಿಠ್ಠಲ ರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನೋ ರಂಗಯ್ಯ           ||ಪೋಗಾದಿರೆಲೊ ರಂಗ||
ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ

Lyrics in English

Pogadirelo ranga bagilindache |p|


Bagavataru kandu etti kondoyvaru ||a.pa||

Suramunigalu tamma hrudaya gafvara dalli |
paramatmana kandu arasuvaru
dorakada vastuvu dorakitu tamagendu
harushadindali ninna karedetii kombuvaru |1|

Aganitaguna ninna jagada nariyarella
hageyagi nudivaro gopalane
magugala manikya tagulitu karakendu
vegadindali bandu bigidappikombuvaru |2|

Ditta nariyarella ishtava salisendu
attatti bennatti tiruguvaro
shrushtisha purandara vittala rayane
ishtihshtu benneya kotteno rangayya |3|


Youtube like here : sung by S.Janaki https://youtu.be/P7wljxoIF3E

By Dr.Rajkuma : https://youtu.be/RUIqpSC1Doo

ರಾಗಿ ತಂದೀರಾ ಭಿಕ್ಷಕೆ ರಾಗಿ / Ragi tandira bhikshake

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ.||

ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ||೧||

ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿ
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ ||೨||

ಕಾಮಕ್ರೋಧವ ಅಳಿದವರಾಗಿ ನೇಮನಿತ್ಯವ ಮಾಡುವರಾಗಿ
ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ ||೩||

ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ
ಕರೆದರೆ ಭವವನು ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿ ||೪||

Lyrics in English

Ragi tandira bhikshake ragi tandira
yogyaragi bhogyaragi bhagyavantaragi nivu ||pa.|

Annadanava maduvaragi annachatravanittavaragi
anyavarteya bittavaragi anudina bhajaneya maduvaragi ||1|

Matapitaranu seviparagi papakarmava bittavaragi
ritiya balanu baluvaragi nitimargadali khyataragi ||2|

Kamakrodhava alidavaragi nemanityava maduvaragi
ramanamava japisuvaragi premadi kunikunidaduvaragi ||3|

Siriramanana dina neneyuvaragi gurutige bahoranthavaragi
karedare bhavavanu niguvaragi purandara vithalana seviparagi ||4||


Youtube link : by Dr.Rajkumar

ಪಾಲಿಸೆ  ಪದುಮಾಲಯೇ /Palise padumalaye

ಪಾಲಿಸೆ  ಪದುಮಾಲಯೇ  ನೀನೆ  ಗತಿ

ಪಾಲಕನು  ತಾನಾಗಿ  ಗೋಪಿಗೆ
ಲೀಲೆಯಿಂದಲಿ  ನಂದಗೋಕುಲ
ಬಾಲೆಯರ  ಮೋಹಿಸುತ  ಅಸುರರ 
ಕಾಲನೆನಿಸಿದ  ಬಾಲಕನ  ಪ್ರಿಯೆ

ಅನ್ಯರ  ನೆನೆಯಲೊಲ್ಲೆ  – ನಿನ್ನಯಪಾದ
ವನ್ನು  ನಂಬಿದೆ  ನೀಬಲ್ಲೆ  – ತಡಮಾಡದಲೆ
ಚಿನ್ನ  ಕರೆಯಲು  ಘನ್ನ  ಮಹಿಮನು 
ಉನ್ನತದ  ರೂಪಿನಲಿ  ಗುಣ  ಸಂಪನ್ನ
ರಕ್ಕಸರನ್ನು  ಸೀಳಿದ 
ಪನ್ನಗಾದ್ರಿ  ನಿವಾಸ  ಹರಿಪ್ರಿಯೇ               (ಪಾಲಿಸೆ )

ಅರಿಯದ  ತರಳನೆಂದು  – ಶ್ರಿಪತಿಸತಿ 
ಕರುಣದಿ  ಸಲಹೆ ಬಂದು  – ಕರುಣಾಸಿಂಧು
ಸರಸಿಜಾಸನ  ರುದ್ರರೀರ್ವರ 
ಬರದಿ  ಮೂರ್ಖನು ಸುರರ ಬಾಧಿಸೆ
ಅರಿವರರ  ದಂಡೆತ್ತಿ  ಬಹುಮುಖ
ದುರುಳನಾಶಿರ ತರಿದ  ವನಪ್ರಿಯೇ          (ಪಾಲಿಸೆ )

ಅಜಮನಸಿಜ  ಜನನಿ  – ಅಂಬುಜಪಾಣಿ
ಭುಜಗ  ಸನ್ನಿಪ ವೇಣಿ – ನಿತ್ಯ  ಕಲ್ಯಾಣಿ
ಕುಜನ  ಮರ್ಧನ  ವಿಜಯ  ವಿಠಲನ
ಭಜಿಸಿ  ಪಾಡುವ  ಭಕ್ತ  ಕೂಟವ
ನಿಜದಿ  ಸಲಹುವೆ-ನೆಂಬ  ಬಿರುದುಳ್ಳ
ವಿಜಯ  ಸಾರಥಿ  ವಿಶ್ವಂಬರ  ಪ್ರಿಯೆ  (ಪಾಲಿಸೆ

Lyrics in English

Palise padumalaye neene gathi

Palakanu thanagi gopige
leele indhali nandha gokula
balayera mohisade asurara
kalanenisida balakana priye ||

Anyara neneyalolle ninnaya padavannu nambhide niballe thade madadhale chinna kareyalu ganna mahimanu unnatha ruppinali guna sampanna rakkasaranna seelida pannagadri nivasa haripriye |palise|

Ariyadha tharalanendhu – shripathisathi karunadi salahe bandhu – karunasindhu sarasijasana rudrarirvara baradi murkhanu surara badise | arivarara dandetthi bahuvida durulana shira tharidu vanapriye  ||palise||

Ajamanasija janani – ambujapani
bhujaga sannipa -veni, nithya kalyani
kujana mardhana vijaya vittalana
bhajisi paduva bhaktha kutava
nijadi salahuva – nemba birudulla vijaya sarathi vishvambara priye       ||palise||

………………………………………………………………………………………………………………………….

Youtube link : https://youtu.be/3_WHdtjJtrU by Sri Vidyabhushana Theertha Swamiji

ರಮಾಸಮುದ್ರನ ಕುಮಾರಿ /Ramasamudrana kumari

ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರ್ಯಾರಮ್ಮ |
ಉಮೇಶ ಮೊದಲಾದ ಮಾರನಿಕರವು ರಮಿಸಿ ನಿನ್ನ ಪದಕಮಲ ಭಜಿಪರು ||

ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಾಡುವೆ ಜಗವ |
ಕೋಪರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕಮ್ಮ ||

ಕರುಣವಾರಿಧಿ ಎಂದು ಶರಣಾಜನರು ನಿನ್ನ ಸ್ಮರಣೆಯಮಾಡುವರೆ |
ಹರಿಣಾಕ್ಷಿ ಕೇಳೆಲೆ ಹರುಷದಿಂದಲಿ ಹರಿಚರಣವ ತೋರಿ ಅಗಹರಣವ ಮಾಡಿಸೆ ||

ವಾಸವನುತ ಸಿರಿ ಶೇಷವಿಠಲನೊಳು ವಾಸವಮಾಡುವಳೆ |
ಘಾಸಿಗೊಳಿಸದಲೆ ಈ ಸಮಯದಲಿ ವಾಸುದೇವಗೆ ಪೇಳಿ ಪೋಷಿಸಬೇಕಮ್ಮ ||

Lyrics in English

Ramasamudrana kumari ninna sarisamanaryaramma | umesh modalada maaranikaravu ramisi ninna padakamala bhajiparu ||

Apaaramahimana vyaaparangala tilidu kapaduve jagava | koparahitalagi Sripatiyolu namma taapatrayava peli poshisabekamma ||

Karunavaaridhi endu sharanajanaru ninna smarane maduvare | harinaakshi kelele harushadindali haricharava tori agaharanava maadise |||

Vaasavanuta siri sheshavittalanolu vasavamaaduvale | ghasigolisadale ee samayadali vasudevage peli poshisabekamma ||

Youtube link : https://youtu.be/JZr864Iju3c by Sri Ananth kulkarni

https://youtu.be/mhcUh-x5dpI by Vidyabhushana theertha Swamiji

ಶ್ರೀ ಮಹಾಲಕ್ಷ್ಮಿ ಅಷ್ಟಕಮ್ / SRI MAHALAKSHMI ASHTAKAM

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ || 1 ||

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 2 ||

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |
ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 3 ||

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |
ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 4 ||

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ || 5 ||

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |
ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 6 ||

ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ || 7 ||

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |
ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ || 8 ||

ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |
ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ || 9 ||

ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಮ್ |
ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ || 10 ||

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಮ್ |
ಮಹಾಲಕ್ಷ್ಮೀರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ || 11 ||

[ ಶ್ರೀ ಮಹಾಲಕ್ಷ್ಮ್ಯಾಷ್ಟಕ ಸ್ತೋತ್ರಂ ಸಂಪೂರ್ಣಮ್

Lyrics in English

MAHALAKSHMI ASHTAKAM

Namastestu Mahamaye
Shree Pithe Sura Poojite |
Shanka Chakra Gadha Haste
Maha Lakshmi Namostute ||1||

Namaste Garudarudhe
Kolasura Bhayankari |
Sarva Papa Hare Devi
Maha Lakshmi Namostute ||2||

Sarvajne Sarva Varade
Sarva Dushta Bhayankari |
Sarva Duhkha Hare Devi
Maha Lakshmi Namostute ||3||

Siddhi Buddhi Prade Devi
Bhakti Mukti Pradayini
Mantra Moorte Sada Devi
Maha Lakshmi Namostute ||4||

Adyanta Rahite Devi
Adi Shakti Maheshwari |
Yogaje Yoga Sambhute
Maha Lakshmi Namostute ||5||

Sthula Sukshme Maha Raudre
Maha Shakti Mahodari |
Maha Papa Hare Devi
Maha Lakshmi Namostute ||6||

Padmasana Sthithe Devi
Parabrahma Swaroopini ||
Parameshi Jagan Mata
Maha Lakshmi Namostute||7||

Shwetambara Dhare Devi
Nanalankara Shobhite|
Jagasthithe Jaganmata
Maha Lakshmi Namoostute ||8||

Maha Lakshmyashtakam Stotram
Yah Patheth Bhakti Man Narah
Sarva Siddhi Mavapnoti
Rajyam Prapnoti Sarvada ||9||

Eka Kalam Pathennityam
Maha Papa Vinashanam
Dwikalam Yah Pathennityam
Dhana Dhanya Samanvitah ||10||

Trikalam Yah Pathennityam
Maha Shatru Vinashanam
Maha Lakshmi Bhavennityam
Prasanna Varada Shubhah||11||

Youtube link : https://youtu.be/0L_hiErVcyE by Bombay sisters

ಮಾಡು ಸಿಕ್ಕದಲ್ಲಾ ಮಾಡಿನ/Maadu sikkadalla madina

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ
ಜೋಡು ಹೆಂಡಿರಿಗಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲಾ ||

ಎಚ್ಚರಗೊಳಲಿಲ್ಲಾ ಮನವೆ ಹುಚ್ಚನಾದೆನಲ್ಲಾ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲಾ ||

ಮುಪ್ಪು ಬಂದಿತಲ್ಲಾ ತಪ್ಪದೆ ಪಾಯಸ ಉಣಲಿಲ್ಲಾ
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ತೊಪ್ಪನೆ ಬಿತ್ತಲ್ಲಾ ||

ಯೋಗವು ಬಂತಲ್ಲಾ ಬದುಕು ವಿಭಾಗವಾಯಿತಲ್ಲಾ
ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲಾ ||

Lyrics in English

Maadu sikkadalla maadina goodu sikkadalla | jodu hendirigangi odihoguvaga gode biddu bayalaayitalla ||

Eccharagolalilla manave hucchnadenalla | acchinolage mecchu mecchinolage acchu kiccheddu hoyitalla ||

Muppu banditalla tappade paayasa unalilla | tuppada bindige tippeya mele toppane bittalla ||

Yogavu bantalla baduku vibhagavayitalla | bhogishayana sri purandara vittalana aga neneyalilla ||

Youtube link : https://youtu.be/jSSQKueaHaU by Sri Vidyabhushana Theertha SwamiJi

ಶ್ರೀಕಾಲಭೈರವಾಷ್ಟಕಂ / Sri Kalabhairavaashtakam

ಶ್ರೀಕಾಲಭೈರವಾಷ್ಟಕಂ ||

ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ
ವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್ |  
ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 1||

ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂ ಪರಂ
ನೀಲಕಂಠ ಮೀಪ್ಸಿತಾರ್ಥ ದಾಯಕಂ ತ್ರಿಲೋಚನಮ್ |
ಕಾಲಕಾಲ ಮಂಬುಜಾಕ್ಷ ಮಕ್ಷಶೂಲ ಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| 2||

ಶೂಲಟಂಕ ಪಾಶದಂಡ ಪಾಣಿಮಾದಿ ಕಾರಣಂ
ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್ |
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||3||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂ ಸ್ಥಿತಂ ಸಮಸ್ತಲೋಕವಿಗ್ರಹಮ್ |  
ವಿನಿಕ್ವಣನ್ಮನೋಜ್ಞ ಹೇಮಕಿಂಕಿಣೀಲಸತ್ಕಟಿಂ  
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| 4||

ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶನಂ 
ಕರ್ಮಪಾಶಮೋಚಕಂ ಸುಶರ್ಮಧಾಯಕಂ ವಿಭುಮ್ | 
ಸ್ವರ್ಣವರ್ಣ ಶೇಷಪಾಶ ಶೋಭಿತಾಂಗಮಂಡಲಂ  
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 5||

ರತ್ನಪಾದುಕಾ ಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್ |
ಮೃತ್ಯುದರ್ಪನಾಶನಂ ಕರಾಲದಂಷ್ಟ್ರಮೋಕ್ಷಣಂ  
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 6||

ಅಟ್ಟಹಾಸ ಭಿನ್ನಪದ್ಮಜಾಂಡಕೋಶಸಂತತಿಂ
ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್ |
ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||7||

ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯ ಪಾಪಶೋಧಕಂ ವಿಭುಮ್ | 
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 8||

Lyrics in English

Sri Kalabhairavaashtakam

Deva Raaja Sevyamaana Paavanaanghri Pankajam
Vyaala Yajnya Sutram Indu Shekharam Krapaakaram |
Naaradaadi Yogi Vranda Vanditam Digambaram
Kaashikaa-Puraadhinatha-Kaalabhairavam Bhaje ||1||

Bhaanu Kotti Bhaasvaram Bhavaabdhi Taarakam Param
Neela Kanttham Iipsita Artha Daayakam Trilocanam |
Kaala Kaala mambujaksha maksha Shula maksharam
Kaashikaa-Puraadhinaatha-Kaalabhairavam Bhaje ||2||

Shula Tanka Paasha Danda Paanimaadi Kaaranam
Shyaama Kaaya madi Deva maksharam Niraamayam |
Bhimavikramam Prabhum Vichitra Taannddava Priyam
Kaashikaa Pura Adhinaatha Kaalabhairavam Bhaje ||3||

Bhukti Mukti Daayakam Prashasta Charu Vigraham
Bhakta Vatsalam Sthitam Samashta Loka Vigraham |
Vinikvanan Manojnya Hema Kinkinnii Lasat Kattim
Kaashikaa Pura Adhinaatha Kaalabhairavam Bhaje ||4||

Dharma Setu Paalakam Tvadharma Maarga Naashakam Karma Paasha Mochakam Susharma Daayakam Vibhum |
Svarnna Varna Shessa Paasha Shobhitaanga Manddalam
Kaashikaa Pura Adhinaatha Kaalabhairavam Bhaje ||5||

Ratna Paadukaa Prabhaabhi Raama Paada Yugmakam
Nityamadvitiiyam Isstta Daivatam Niramjanam |
Mrtyu Darpa Naashanam Karaala- Damssttra Mokssannam
Kaashikaa Pura Adhinaatha Kaalabhairavam Bhaje ||6||

Attttahaasa Bhinna Padmajanda Kosha Samtatim
Drshtti Paata Nashtta Paapa Jaalam Ugra Shaasanam |
Asstta Siddhi Daayakam Kapaala Maalikaa Dharam
Kaashikaa Pura Adhinaatha Kaalabhairavam Bhaje ||7||

Bhuta Sangha Naayakam Vishaala Kiirti Daayakam
Kaashi Vaasa Loka Punnya Paapa Shodhakam Vibhum |
Neeti Maarga Kovidam Puraatanam Jagatpatim
Kaashikaapuraadhinaatha kaalabhairavam Bhaje ||8||

Youtube link : https://youtu.be/-4gk_aRjc-E by Sri S.P.BALASUBRAMANIUM

By Sri Bombay Sisters : https://youtu.be/R_mLrB7yxK0

ಕಲ್ಲುಸಕ್ಕರೆ ಕೊಳ್ಳಿರೋ /Kallu sakkare kolliro

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ ||

ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ ||

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ |
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ ||

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ |
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ ||

ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ |
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ ||

Lyrics in English

Kallu sakkare kolliro nivellaru kallu sakkare kolliro ||pa||

kallu sakkare savi ballavare ballaru pulla lochana shri krishna namavemba||a.pa||

Ettu herugalinda hottu maruvadalla ottotti goniyol tumbuvadalla |
etta hodaru badige sunkavidakilla uttama sarakidu ati laba baruvantha ||

Nashta bIluvudalla nada huttuvudalla eshtu oidaru bele rokkavidakilla |
kattiruveyu tindu kadimeyaguvudilla pattanadolage prasidhavagiruvantha||

Satte santege hogi shrama paduvadalla santeyolage ittu maruvudalla |
santata bhaktara nalige savigomba kanta purandara vittalana namavemba||


ಅಳುವದ್ಯಾತಕೊ ರಂಗ /Aluvudyatako ranga

ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ

ಪುಟ್ಟಿದೇಳು ದಿವಸದಲಿ  ದುಷ್ಟ ಪೂತನಿಯ ಕೊಂದೆ
ಮುಟ್ಟಿ ವಿಷದ ಮೊಲೆಯುಂಡ ಕಾರಣ
ದೃಷ್ಟಿ ತಾಕಿತೆ ನಿನಗೆ ರಂಗಯ್ಯ

ಬಾಲಕತನದಿ ಗೋಪಾಲಕರೊಡಗೂಡಿ
ಕಾಳಿಂದಿ ಮಾಡುವನು ಕಲಕಿದ ಕಾರಣ
ಕಾಲು ಉಳುಕಿತೆ ನಿನಗೆ ರಂಗಯ್ಯ

ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆ
ಬೆರಳಲಿ ಬೆಟ್ಟವನೆತ್ತಿದ ಕಾರಣ
ಬೆರಳು ಉಳುಕಿತೆ ನಿನಗೆ ರಂಗಯ್ಯ

ವಾಸುದೇವ ಸುತನಾಗಿ ಅಸುರರೆಲ್ಲರ ಮಡುಹಿ
ಹೆಸರಿನ ಮಲ್ಲರ ಮಡುಹಿದ ಕಾರಣ
ಕಿಸಿರು ತಾಕಿತೆ ನಿನಗೆ ರಂಗಯ್ಯ

ಶರಣು ವೇಲಾಪುರದ ಚೆಲುವ ಚೆನ್ನಿಗರಾಯ
ಪರಿಪರಿ ವಿಧದಿಂದ ಶರಣರ ಪೊರೆಯುವ ವರದ ಪುರಂದರವಿಠಲರಾಯ 

Lyrics in English

Aluvudyatako ranga attaranjipa gumma

Huttidelu divasadali dushta putaniya konde | mushti vishada moleyunda karaaa drishti tagite ninage rangayya||


Turuva kayalu pogi baradi indra male kareye |beralali bettava nettida karana beralu ulukide ninage rangayya ||


Vasudeva sutanagi asurarellara maduhi|hesarina mallara maduhida kaarana kisaru tagite ninage rangayya


Sharanu velapurada cheluva chennigaraya pari pari vidhadinda
sharanara poreyuva varada purandara vittalaraya ||

Youtube link : https://youtu.be/OgK9hQ3f9Y0

ಸುಂದರಮೂರುತಿ ಮುಖ್ಯಪ್ರಾಣ / Sundaramooruti mukhyaprana

ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆ
ಶ್ರೀರಾಮನಾಮ ಧ್ವನಿಗೆ
ಕಣಕಾಲಂದುಗೆ ಗೆಜ್ಜೆ ಝಣ ಝಣರೆನುತ

ಝಣಕು ಝಣಕುರೆಂದು ಕುಣಿ ಕುಣಿದಾಡುತ ತುಂಬುರು ನಾರದ ವೀಣೆಯ ಬಾರಿಸುತ
ವೀಣೆ ಬಾರಿಸುತ

ಶೀರಾಮನಾಮ ಪಾಡುತ ಕುಣಿದಾಡುತ ಪುರಂದರವಿಠಲನ ನೆನೆದು ಪಾಡುತಲಿ ನೆನೆದು ಪಾಡುತಲಿ ಆಲಿಂಗನ ಮಾಡುತಲಿ

Lyrics in English

Sundara muruti mukhya prana banda namma manege shri rama nama dhvanige||

Kanakalanduge gejje jhana jhanarenuta jhanaku jhanakurendu kuni kunidaduta||

Tumburu naradaru veeneya barisuta veene barisuta shri rama nama paduta||

Purandara vittalana nenedu padutali nenendu padutali alingana madutali||

You can listen to the song here : https://youtu.be/Yj1r50KRoJc by Sri Vidyabhushana theertha swamiji