ಪೊಂಗೊಳಲನೂದುತಿಹ /Pongolalanoodutiha

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ತಿಂಗಳಾಪಾಂಗ ನೀರಾಜಿತ ಶುಭಾಂಗ

ಸಲಿಲಗಾಚಲಧರನೆ ಇಳೆಯಾಣ್ಮ ಜ್ವಲನೇತ್ರ
ಬಲಿಯ ಬೇಡಿದೆ ಭೃಗುಕುಲಜನೆನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿ
ಖಳರ ಸಂಭೋಧಿಸಿದೆ ಚೆಲುವ ಹಯವೇರಿ

ಬಿಡದೆ ನೋಡಿದೆ ಬೆಟ್ಟದಡಿಗೆ ಬೆನ್ನನು ಕೊಟ್ಟೆ
ಅಡವಿಚರ ಕಡುಕೋಪಿ ಕೊಡೆಯ ಪಿಡಿದು
ಕೊಡಲಿಕೈ ಜಡೆ ಧರಿಸಿ ಗಿಡ ಹತ್ತಿ ಕೆಡಿಸಿ ಸ-
ನ್ಮಡದಿಯರ ಹಯವೇರಿ ಕಡಿದೆ ರಣಶೂರ

ವಾರಿಚರ ಕೂರ್ಮಾವತಾರ ಸೂಕರ ಹರಿಯೆ
ಧಾರುಣೆಯನಳೆದೆ ಶೂರರನು ಗೆಲಿದೆ
ನೀರಜಾಕ್ಷಿಯ ತಂದೆ ಚೋರ ವ್ರತವನಳಿದೆ ಹಯ-
ವೇರಿದನೆ ಪುರಂದರವಿಠಲ ಜಗದಯ್ಯ

Lyrics in English

Pongolalanoodutiha yadukulottunga

Tingalaapaanga neerajita shubhanga

Salilagaachaladharana eleyaanma jwalanetra | baliya bedida bhrugukulajanenisi  | balida billane muridu lalaneyara vashanagi khalara sambhodiside cheluva hayaveri ||

Bidade nodide bettadadige bennanu kotte | adavichara kadukopi kodeya pididu | kodalikai jade dharisi gida hatti kedisi sanmadadiyara hayaveri kadide ranashoora ||

Vaarichara koormaavataara sookara hariye | dhaaruneyanalede shooraranu gelide | neerajaakshia tande chora vratavanalide hayavadana purandaravittala jagadayya ||

Listen to the song here : https://youtu.be/zZ35RO2RZl4

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ / Palise enna shri mahalakshmi

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ |

ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ|

ವೇದಾಭಿಮಾನಿ ಸಾರಸಾಕ್ಷಿ
ಶ್ರೀಧರರಮಣಿ|
ಕಾದುಕೊ ನಿನ್ನಯ ಪಾದಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ||

ದಯದಿಂದ ನೋಡೆ ಭಜಿಪ ಭಕ್ತರ
ಭಯ ದೂರ ಮಾಡೆ|
ದಯಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಜಗದೀಶನ ಪ್ರೀತೆ||

ನೀನಲ್ಲದನ್ಯ ರಕ್ಷಿಪರನು
ಕಾಣೆ ನಾ ಮುನ್ನ|
ದಾನವಾಂತಕ ಸಿರಿ ಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ||

Lyrics in English

Palise enna shri mahalakshmi palise ennanu pAlabdi sanjate |

Lalitangi shubhe devi mangale devi |

Vedabhimani ssrasakshi shridhara ramani kaduko ninnaya |
pada sevakarannu adi shakti sarvadhare guna purne ||


Dayadinda node bhajipa bhaktara bhaya dura made daya palise 
mate trailokya vikhyate jaya devi suvrate hayavadanana preete||


Ninalladanya rakshiparanu kane na munna danavantaka siri 
purandara vittalana dhyaniya bhakutara mana ninnadu taye ||

You can listen to the song here: https://youtu.be/Sqy2Tld7Yjc by Sri Vidyabhushana Theertha Swamiji

ನೋಡುವುದೇ ಕಣ್ಣು ಕೇಳುವುದೇ/Noduvude kannu keluvude

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ ||

ಗಾಡಿಕಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖದ ಸೊಬಗನು||

ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ|
ಅಂಗಜ ಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ||

ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ|
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ||

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಬಿಡಿಸಿಕೊಂಬನ|
ಗರುಡಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ||

Lyrics in English

Noduvude kannu keluvude kivi paduvude vadana||

Gadigara shri venugopalana kudi kondaduva sukhava sobaganu||a.p|

Pongolaluduta mruga pakshigalanella sangalisutalippana  |angaja janaka gopanganerodane beladingalolage sulidado rangayyana ||1||


navilante kuniva hamseyante naliyuva | mari kokileyante kuguva 
eraleya mariyante jigijigidaduva tumbi jhenkarisuvandadi jhenkaripana ||2||


Murudu kubjeya donku tiddi rupava madi sereya pidisi kombana 
garuda gamana guru purandara vittalana sharanagata suradenu rangayyana ||3||

Click the link to listen song here: https://youtu.be/RGwgTmfutzU by Sri Maharajapuram Santhanam

ತಿರುಪತಿ ವೆಂಕಟರಮಣ /Tirupati Venkataramana

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ||

ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲು ಧ್ವನಿಯೂದೋ ಚಂದ ನಮ್ಮ ಕುಂಡಲರಾಯ ಮುಕುಂದ ||1||

ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ
ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ ||2||

ಮೂಡಲ ಗಿರಿಯಲಿ ನಿಂದ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತ ಈರೇಳು ಲೋಕಕನಂತ||3||

ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳಿನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ ||4||

ಅಪ್ಪವು ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ ||5||

ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯನ್ನ
ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗುಮುಖದ ಸುಪ್ರಸನ್ನ ||6||

ಕಾಶಿ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದು ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೆ ಚೆಂದ ||7||

ಎಲ್ಲಾ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡ ||8||

ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ ||9||

ದಾಸರ ಕಂಡರೆ ಪ್ರಾಣ ತಾ ಧರೆಯೊಳಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯ ಕಲ್ಯಾಣ ||10||

ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕಯ್ಯ
ಏಸು ಮಹಿಮೆಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ ||11||

ಚಿತ್ತಾವಧಾನ ಪರಾಕು ನಿನ್ನ ಚಿತ್ತದ ದಯ ಒಂದೇ ಸಾಕು
ಸತ್ಯವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು ||12||

ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು ||13||

ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ ||14||

ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೆ ಪಾನ
ಕೋಪ ತಾಪಗಳ ನಿಧಾನ ನಮ್ಮ ಪುರಂದರ ವಿಠಲನ ಧ್ಯಾನ ||15||

Lyrics in English

Tirupati Venkataramana Ninagyatake Baradu Karuna
Nambide Ninnaya Charana Paripalisa Beko Karuna ||pa||


Alagiriyindalli Banda Svami Anjanagiriyali Ninda
Kolaludo Dvani Chanda Namma Kundalaraya Mukunda ||1||


Beteyaduta Banda Svami Bettada Mele Ninda
Nitugara Govinda Alli Jenu Sakkareyanu Tinda ||2||


Moodala Giriyali Ninda Muddu Venkatapati Balavanta
Idilla Ninage Shrikanta Irelu Lokakananta ||3||


Adidare Sthiravappa Abhaddagaladalu Oppa
Bedida Varagalanippa Namma Mudalagiri Timmappa ||4||


Appava Atirasa Medda Svami Asurara Kalali Odda
Satiyayara Kudadutalidda Svami Sakala Durjanaranu Gedda ||5||


Bage Bage Bhaksa Paramanna Nana Bageya Sakala Shalyanna
Bage Bage Sobagu Mohanna Namma Nagumukhada Suprasanna ||6||


Kashi Rameshvaradinda Alli Kanike Baruvude Chanda
Dasara Kude Govinda Alli Dari Nadevude Chanda ||7||


Ella Devara Ganda Ava Chillare Daivada Minda
Ballidavarige Uddanda Shiva Billa Murida Prachanda ||8||


Kasu Tappidare Patti Baddi Kasu Bidade Gantu Katti
Dasanendare Bida Gatti Namma Kesakki Timmappasetti ||9||


Dasara Kandare Prana Ta Dhareyolagadhika Pravina
Dveshiya Gantala Gana Namma Devage Nitya Kalyana ||10||


Mosa Hoguvanallayya Ondu Kasige Odduva Kayya
Esu Mahimegaranayya Namma Vasudeva Timmayya ||11||

Chittavadhana Paraku Ninna Chittada Daya Onde Saku
Satyavahini Ninna Vaku Ninu Sakala Janarige Beku ||12||


Allalli Parisheya Gumpu Mattallalli Topina Tampu
Allalli Sogasina Sompu Mattallalli Parimaladimpu||13||


Allalli Janagala Kuta Mattallalli Brahmanaruta
Allalli Pidida Kolata Mattallallinda Urige Ota ||14||


Papa Vinashini Snana Hari Padodakave Pana
Kopa Tapagala Nidhana Namma Purandara Vittalana Dhyana

Click the below link to listen : https://youtu.be/JtxernSV3VY by Putturu Narasimha Nayak

https://youtu.be/1bsMZNoBJAA by Sri Ramakrishna Katukukke

ಓ ಪಾಂಡುರಂಗ ಪ್ರಭೋ/O panduranga prabho

ಓ ಪಾಂಡುರಂಗ ಪ್ರಭೋ ವಿಠ್ಠಲ ವೇಣುಗೋಪಾಲ ರುಕ್ಮಿಣೀಲೋಲ ||ಓ ಪಾಂಡುರಂಗ ಪ್ರಭೋ ವಿಠ್ಠಲ ||ವೇಣುಗೋಪಾಲ ರುಕ್ಮಿಣೀಲೋಲ||

ನಿನ್ನೀ ಪಾವನ ಪಾದಗಳ |ಮಹಿಮೆಯ ಬಣ್ಣಿಸೇ ಮಾತುಗಳ|ಕಾಣೆನು ತಂದೆ ವಿಠ್ಠಲಾ ||ಓ ಪಾಂಡುರಂಗ ||

ಆಕಾಶ ಭೂಮಿಗಳ ಅಳೆದಂತ ಪಾದ | ಕಾಳಿಂಗನಾಶಿರದಿ ಕುಣಿದಾಡಿದ ಪಾದ |ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ | ಪಾವನ ಶ್ರೀ ಪಾದವ ನಂಬಿಹೆನಯ್ಯ ||ಓ ಪಾಂಡುರಂಗ ||

ಶ್ರೀ ದೇವಿ ಪೂಜಿಸುವ ಶ್ರೀಹರಿಯ ಪಾದ | ಭಕುತರಿಗೆ ಮುಕುತಿಯನು ಕೊಡುವಂತ ಪಾದ |ಪಾಪವನು ಕಳೆವಂತ, ಸುರಗಂಗೆ ಜನ್ಮಿಸಿದಂತ |
ರಂಗನ ಶ್ರೀ ಪಾದವ ನಂಬಿಹೆನಯ್ಯ ||ಓ ಪಾಂಡುರಂಗ ||ಓ ಪಾಂಡುರಂಗ ||

ಪ್ರಭೋ ವಿಠ್ಠಲ ಪ್ರಭೋ ವಿಠ್ಠಲ ಪ್ರಭೋ ವಿಠ್ಠಲ

Lyrics in English

O panduranga prabho vittala venugopala rukmini lola ||O panduranga||venugopala rukmini lola | |

Ninnee paavana padagala | mahimeya bannise matugala | kaanenu tande vittalaa || O panduranga ||

Aakasha bhumigala aledanta paada |kaalingana shiradi kunidadida paada | kaananadi kallaada munisatige jeevava tanda pavana sri padava nambihenayya ||O panduranga||

Sri devi poojisuva srihariya paada | bhakutarige mukutiyanu koduvanta paada | paapavanu kalevanta suragange janmisidanta rangana Sripadava nambihenayya |O panduranga ||

Prabho vittala prabho vittala

You can listen to the song here : https://youtu.be/1E76ZyUTfck

ಚಿಂತ್ಯಾಕ ಮಾಡುತಿದ್ದಿ /Chintyake maadutiddi

ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ | ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ ||

ಎಳ್ಳು ಕೊನೆಯು ಮುಳ್ಳುಮೊನೆಯು |ಪೊಳ್ಳು ಬಿಡದೆ ಒಳಗೆ ಹೊರಗೆ |ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ೧ ||

ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ ನಿನ್ನ ಸಲಹುವರ‍್ಯಾರೋ ಅಂದಿಗೂ ಇಂದಿಗೂ ಎಂದಿಗೂ ನಂದಿ ವಾಹನನಿದ್ದಾನೆ  || ೨ ||

ನಾನು ನೀನು ಎಂಬುದು ಉಭಯ  ಹೀನ ಗುಣಗಳೆಲ್ಲಾ ಕಳೆದು ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ || ೩ ||

Lyrics in English

Chintyake maadutiddi chinmayaniddaane | swami chinmayaniddaane | ninna chinteya bidisuva gowri kaantaniddane ||

Ellu koneyu mullu moneyu | pollu bidade olagehorage |ella taavinalli gowri vallabhaniddane ||1||

Hinde ninna salahidaryaro | munde ninna salahuvaryaro |2times|adindendendigoo nandi vaahaaniddane ||

Naanu neenu enba ubhaya heena gunagalella kaledu jnaani chidanand sukha sampoornaniddane ||

You can listen to the song here :

ರಂಗನಾಯಕ ರಾಜೀವಲೋಚನ/ Ranganaayaka raajivalochana

ರಂಗನಾಯಕ ರಾಜೀವ ಲೋಚನ
ರಮಣನೇ ಬೆಳಗಾಯಿತು ಏಳೆನ್ನುತಾ ।ಪ।

ಅಂಗನೇ  ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತಾ ।।ಪ।।

ಪಕ್ಷರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷೀಸೆಂದು
ಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾ
ಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ಪ।।

ಸನಕ ಸನಂದನ  ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು
ಘನಶುಕ  ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾಡುವರು  ಹರಿಯೇ ।।ಪ।।

ಸುರರು ಕಿನ್ನರರು ಕಿಂಪುರುಷರು ಉರಗುರು
ಪರಿಪರಿಯಲಿ  ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು  ಭಾಸ್ಕರನು ಶ್ರೀಹರಿಯೇ ।।ಪ।।

ಪದುಮನಾಭನೇ  ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತಾ  ಪಾಡುತ್ತಾ
ದಧಿಯ ಕಡೆವರೇಳೋ  ಮಧುಸೂಧನ ಕೃಷ್ಣಾ।।ಪ।।

ಮುರಮಥನನೇ  ನಿನ್ನ ಚರಣದ  ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೇ  ಸ್ಮರಿಸಿ ಹಾರೈಪರು
ಪುರಂದರ ವಿಠಲ ನೀನೇಳೋ  ಶ್ರೀ ಹರಿಯೇ।।ಪ।।

Lyrics In English:

Ranganayaka  rajeeva lochana
ramanane belagayitu elennutaa||pa||
angane lakumi taa patiyanebbisidalu
shrungarada nidre sakennutaa||pa||

Pakshirajanu bandu bagilalli nindu
akshi teredu bega eekshisendu
pakshi jatigalella chilipiliguttutaa (2)
sookshmadali ninna smarisuvavo krushna||pa||

Sanaka sanandana sanatsujataru bandu
vinayadim kara mugidu olaiparu
ghanashuka shounaka vyaasa valmikaru
nenedu nenedu kondaduvaru hariye||pa||

Suraru kinnararu kimpurusharu uraguru
paripariyali ninna smarisuvaru
arunanu bandu udayachaladali nindu
kirana toruvanu bhaskaranu srihariye||pa||

Padumanabhane ninna naamamrutavannu
padumaakshyari tamma gruhadolage
udayadoleddu savidaadutta paadutta
dadhiya kadevarelommadhudoodhana krishna||pa||

Muramathanane ninna charanada seveya
karunisabekendu taruniyaru
paripariyindale smarisi haraiparu
purandaravithala neenelo srihariye||pa||

Listen to the song in below given link by Vidyabhushana Theertha Swamiji https://youtu.be/bsI30qItJvk

By Putturu Narasimha Nayak https://youtu.be/eVBV46-SI1c

ವೆಂಕಟರಮಣನೆ ಬಾರೋ /Venkata ramanane baaro

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ||

ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ||

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ         ||೧||

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ    ||೨||

ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ  ||೩||

Lyrics in English

Venkata ramanane baaro seshachala vaasane baaro |
pankaja naaba parama pavithra shankara mithrane baaro ||

Muddhu mukava maguve ninage muddu koduveno baaro |
nirdhaya veko ninnolage naanu pondhidhdheno baaro ||

Mandhara giriya nethidha ananda moorthiye baaro |
nandana kandha govinda mukunda indirearasane baaro ||

Kaamanaiya karunaalo shyamala varnane baaro |
komalaanga sri purandara vitalane swaami raayane baaro ||

Listen to the song here : https://youtu.be/k9ouvaYffqE

ನಂಬದಿರು ಈ ದೇಹ ನಿತ್ಯವಲ್ಲ/Nambadiru e deha nityavalla

ನಂಬದಿರು ಈ ದೇಹ ನಿತ್ಯವಲ್ಲ
ಅಂಬುಜಾಕ್ಷನ ಭಜಿಸಿ ಸುಖಿಯಾಗೊ ಮನವೆ||

ಎಲುಬು ರಕ್ತಮಾಂಸಗಳು ಮೇಲೆ ಚರ್ಮದ ಹೊದಿಕೆ |
ಒಳಗೆ ಮಲ ಮೂತ್ರ ಕ್ರಿಮಿರಾಶಿ ಇಹವು |
ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು|
ಬಲುಹು ದೇಹವ ನೆಚ್ಚಿ ಕೆಡಬೇಡ ಮನವೆ||

ಸತಿ ಸುತರು ಹಿತರೆಂದು ಮತಿ ಮರೆತು ಮಮತೆಯಲಿ|
ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು|
ಸತತ ಲಕ್ಷ್ಮೀಪತಿಯ ಶರಣೆನ್ನದಿಹಪರದ|
ಗತಿ ಶೂನ್ಯನಾಗಿ ನೀ ಕೆಡಬೇಡ ಮನವೆ||

ಪರರ ನಿಂದಿಸದೆ ಪರ ವಧುಗಳನು ಬಯಸದೆ|
ಗುರು ವಿಪ್ರ ಸೇವೆಯನು ಮಾಡು ಬಿಡದೆ|
ಹರಿ ಸ್ತುತಿಯ ನೀ ಕೇಳು ಹರಿ ಕೀರ್ತನೆಯ ಪಾಡು|
ಸಿರಿ ಪುರಂದರವಿಠಲನೊಲಿದು ಪಾಲಿಸುವ||

Lyrics in English

Nambadiru e deha nityavalla
Ambujakshana Bajisi sukiyagu manave ||pa||

Elubu rakta mamsagala mele charmada hodike|
Olage malamutradi krimigaliravu|
Halavu vyadhiya bidu panchabutadanadu|
Baluhu dehava necchi kedabeda manuja ||1||

Sati sutaru hitarendu mati maredu mamateyali|
Atikamksheyinda durvishaya balidu|
Satata lakshmipatiya saranenade ihaparada|
Gatisunyanagi ni kedabeda manuja |2|

Parara nindisade paravadhugalanu bayasade|
Guruvipra seveyanu madu bidade|
Hari stutiya ni kelu hari kirtaneya madu|
Siripurandaravithalanolidu palisuva ||3||

Click the link to listen song : https://youtu.be/EZgQfsF8Vjk by Dr.Raj kumar

ನೀನ್ಯಾಕೋ ನಿನ್ನ ಹಂಗ್ಯಾಕೋ/Ninyako ninna hangyako

ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮಾದ ಬಲವೊಂದಿದ್ದರೆ ಸಾಕೊ

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೊ||

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಬಾಲಕೃಷ್ಣನೆಂಬ ನಾಮವೆ ಕಾಯ್ತೊ||

ಯಮನ ದೂತರು ಬಂದು ಅಜಾಮಿಳನೆಳೆವಾಗ
ನಾರಾಯಣನೆಂಬ ನಾಮವೆ ಕಾಯ್ತೊ||

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲನೆಂಬ ನಾಮವೆ ಕಾಯ್ತೊ||

ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹನೆಂಬ ನಾಮವೆ ಕಾಯ್ತೊ||

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೆ ಕಾಯ್ತೊ||

ನಿನ್ನ ನಾಮಕೆ ಸರಿ ಯಾವುದು ಕಾಣೆನೊ
ಘನ್ನ ಮಹಿಮ ಸಿರಿ ಪುರಂದರವಿಠಲ||

Lyrics in English

Ninyako ninna hangyako ninna namadabala vondiddarr sako||pa||

A mara emara dhyani suttiruvaga rama rama emba namavr kaito
||Ninyako||

Baleya sabheyalli seereya selevaga krishna krishna emba namavekaito
||Ninyako||

Yamana dutaru bandu ajamilana elevaga narsyananemba namavekaito
||Ninyako||

Kari makarige sikki moreyidutiruvaga adimulavemba namavekaito ||Ninyako||

Prahlada pita badhisutiruvaga narahariyemba namavekaito
||Ninyako||

Hasuli adhruvaraya adavigr popaga vasudevanemba namavekaito
||Ninyako||

Ninna namake sari kaneno jagadolu ghanna mahima shri purandara vithala
ninna namada bala vondiddare sako 
||Ninyako||

You can listen to the song here by Pandit Bhimsen Joshi : https://youtu.be/NR1eruBMhwk